ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
home  Printer friendly Page home  Email this page
English Features
Month Year
  • ತೋಟಗಾರಿಕೆ ಇಲಾಖೆಯ ನೆರವು ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಬರದಲ್ಲೂ ಬಂಪರ್ ಕಲ್ಲಂಗಡಿ ಬೆಳೆ   14-March,2017
 
Department of Horticulture - Sericulture

Gerbera special story
ಬಿಸಿಲ ನಾಡಲ್ಲಿ ಜರ್ಬೆರಾ ಹೂಗಳ ಕಲರ: ಬಿಸಿಲ ನಾಡೆಂದೇ ಹೆಸರುವಾಸಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಕೃಷಿಭಾಗ್ಯ ಯೋಜನೆಯ ಪ್ರಯೋಜನ ಪಡೆದು ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ “ಜರ್ಬೆರಾ” ಬೆಳೆದ ಕೀರ್ತಿ ಕಲಬುರಗಿ ತಾಲೂಕಿನ ಕಪನೂರ ಗ್ರಾಮದ ರೈತ ಸೈಯ್ಯದ್ ರಿಯಾಜುದ್ದಿನ್ ಭುಟ್ಟೊ ಅವರಿಗೆ ಸಲ್ಲುತ್ತದೆ. ಇವರು ಒಟ್ಟು 3 ಎಕರೆ ಜಮೀನು ಹೊಂದಿದ್ದಾರೆ. ಪ್ರಾರಂಭದಲ್ಲಿ ಕೇವಲ 10 ಗುಂಟೆ ಜಮೀನಿನÀಲ್ಲಿ ಕೆಎಫ್ ಬಯೋ ಟೆಕ್ ತಂತ್ರಜ್ಞಾನ ಅಳವಡಿಸಿ ಬೆಡ್ ಸಿಸ್ಟಂದಿಂದ ನೈಸರ್ಗಿಕ ನೆರಳು ಪರದೆ(ಪಾಲಿ ಹೌಸ್) ಘಟಕ ಸ್ಥಾಪಿಸಿಕೊಂಡು ಪೂನಾದಿಂದ 6000 ಜರ್ಬೆರಾ ಹೂ ಸಸಿಗಳನ್ನು ಆಗಸ್ಟ್ ಮಾಹೆಯಲ್ಲಿ ನಾಟಿ ಮಾಡಿ 3 ತಿಂಗಳ ಬಳಿಕ ಪ್ರತಿ ದಿನ ಒಂಭತ್ತು ವಿಧದ ಸುಮಾರು 1000ದಂತೆ ತಿಂಗಳಿಗೆ 30000 ಜರ್ಬೆರಾ ಹೂಗಳನ್ನು ಪಡೆಯುತ್ತಿದ್ದಾರೆ. ಇವುಗಳ ಮಾರಾಟದಿಂದ ಎಲ್ಲ ಖರ್ಚು ವೆಚ್ಚ ಹೋಗಿ ಮಾಸಿಕ ಸರಾಸರಿ 50000 ರೂ. ಲಾಭ ಗಳಿಸುತ್ತಿದ್ದಾರೆ. ಈ ಬೆಡ್ ಸಿಸ್ಟಂದಿಂದ ಇಳುವರಿ ಪ್ರಮಾಣ ಹೆಚ್ಚು ಬರುತ್ತದೆ. ಆದರೆ ನಿರ್ವಹಣಾ ವೆಚ್ಚ ಮತ್ತು ಕೀಟ ಬಾಧೆ ಚಿಠಿಂಥಿ ಹೆಚ್ಚು ಇರುತ್ತದೆ. ಸದರಿ ರೈತರು ಪುನಃ 10 ಗುಂಟೆ ಪ್ರದೇಶದಲ್ಲಿ ನೈಸರ್ಗಿಕ ನೆರಳು ಪರದೆ(ಪಾಲಿ ಹೌಸ್) ಘಟಕದಲ್ಲಿ ಜರ್ಬೆರಾ ಹೂ ಕೃಷಿಯನ್ನು ವಿಸ್ತರಿಸಿಕೊಂಡಿದ್ದಾರೆ. ಹೊಸ ಪದ್ಧತಿಯ ಮೂಲಕ 7200 ಹೂಕುಂಡಗಳಲ್ಲಿ ಕೋಕೋ ಪಿಟ್ ಮಣ್ಣಿನಲ್ಲಿ ಜರ್ಬೆರಾ ಸಸಿಗಳನ್ನು ಬೆಳೆದಿದ್ದಾರೆ. ಈ ಪದ್ಧತಿಯಿಂದ ಸರಾಸರಿ ಇಳುವರಿ ಪ್ರಮಾಣ ಕಡಿಮೆ ಇದ್ದರೂ ನಿರ್ವಹಣಾ ವೆಚ್ಚ ಮತ್ತು ಕೀಟ ಬಾಧೆ ಹೆಚ್ಚು ಇರುವುದಿಲ್ಲ. ಈ ಜರ್ಬೆರಾ ಹೂ ಕೃಷಿಯನ್ನು ಒಂದು ಸವಾಲಾಗಿ ಸ್ವೀಕರಿಸಿದ ರಿಯಾಜುದ್ದಿನ್ ಭುಟ್ಟೊ “ಜಿಲ್ಲೆಯ ವಿವಿಧ ಪ್ರಗತಿಪರ ರೈತರ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರೋತ್ಸಾಹ ಮತ್ತು ತಾಂತ್ರಿಕ ಸಲಹೆಯ ಮೇರೆಗೆ ಜರ್ಬೆರಾ ಹೂ ಕೃಷಿ ಕೈಗೊಂಡಿದ್ದೇನೆ. ಪ್ರಾರಂಭದಲ್ಲಿ ಮಣ್ಣಿನ ಹಾಗೂ ಇತರ ಸಮಸ್ಯೆ ಎದುರಿಸಿದ್ದರೂ ಕೊಳವೆಬಾವಿಯಲ್ಲಿ ಮೂರು ಇಂಚು ನೀರಿನ ಲಭ್ಯತೆಯ ಮೆರೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಧÀೃತಿಗೆಡದೆ ಮುಂದೆ ಬಂದು ಜರ್ಬೆರಾ ಬೆಳೆದಿದ್ದೇನೆ. ವರ್ಷಪೂರ್ತಿ ಜರ್ಬೆರಾ ಹೂಗಳು ಬಿಡುತ್ತವೆಯಾದರೂ ಮದುವೆ ಮುಂಜಿವೆ ಋತುವಿನಲ್ಲಿ ಇವುಗಳ ಮಾರಾಟ ಹೇರಳವಾಗಿ ನಡೆಯುತ್ತದೆ ಹಾಗೂ ಪ್ರತಿ ಹೂ 8-10ರೂ.ದಂತೆ ಒಂದೊಂದು ಸಲ 15ರೂ.ಗೂ ಮಾರಾಟವಾಗುತ್ತದೆ. ಪ್ರಾರಂಭದಲ್ಲಿ ಹೈದ್ರಾಬಾದಿನಲ್ಲಿ ಮಾರಾಟ ಮಾಡಿದ್ದು, ಈಗ ಸ್ಥಳೀಯವಾಗಿಯೂ ಮಾರಾಟ ಮಾಡಲಾಗುತ್ತಿದೆ. ಇದಕ್ಕಾಗಿ ಪ್ಯಾಕಿಂಗ್ ಘಟಕ ಸಹ ಸ್ಥಾಪಿಸಲಾಗಿದೆ. ಒಂದು ಬಾಕ್ಸಿನಲ್ಲಿ 150-400 ಜರ್ಬೆರಾ ಹೂಗಳನ್ನಿಟ್ಟು ಸಹೋದರ ಸೈಯ್ಯದ್ ಸಿರಾಜುದ್ದಿನ್ ಅವರ ಸಹಾಯ ಸಹಕಾರ ಪಡೆದು ಈ ಬೇಸಾಯ ಕೈಗೊಂಡಿರುವುದು ತುಂಬಾ ಅನುಕೂಲವಾಗಿದೆ. ಇದಲ್ಲದೆ ಎರಡು ಎಕರೆಯಲ್ಲಿ ಬಾಳೆ ಸಹ ಬೆಳೆಯಲಾಗಿದೆ” ಎಂದು ಹೇಳುತ್ತಾರೆ. ಕೃಷಿಭಾಗ್ಯ ಯೋಜನೆಯಡಿ ಒಂದು ಎಕರೆವರೆಗೆ ನೈಸರ್ಗಿಕ ನೆರಳು ಪರದೆ(ಪಾಲಿ ಹೌಸ್) ಘಟಕ ಸ್ಥಾಪಿಸಿಕೊಳ್ಳಲು ಅವಕಾಶವಿದ್ದು, ಪ್ರತಿ ಚ.ಮೀ.ಗೆ 490 ರೂ. ಸಹಾಯಧನ ನೀಡಲಾಗುತ್ತದೆ. ಸದರಿ ರೈತರು ಸ್ಥಾಪಿಸಿಕೊಂಡ ಎರಡೂ ಘಟಕಗಳಿಗೆ ಸುಮಾರು 20 ಲಕ್ಷ ರೂ. ವೆಚ್ಚ ತಗುಲಿದ್ದು, ತೋಟಗಾರಿಕೆ ಇಲಾಖೆಯಿಂದ 10 ಲಕ್ಷ ರೂ. ಸಹಾಯಧನ ಒದಗಿಸಲಾಗಿದೆ. ಹರಿಯಾಣಾ ರಾಜ್ಯದಲ್ಲಿ ಜರ್ಬೆರಾ ಹೂವಿನ ಬೇಸಾಯ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿರುವುದನ್ನು ತಾವು ಗಮನಿಸಿ ಕಲಬುರಗಿ ಜಿಲ್ಲೆಯಲ್ಲಿಯೂ ಈ ಬೇಸಾಯ ಮಾಡುವ ಪ್ರಥಮ ಪ್ರಯತ್ನವಾಗಿ ಸೈಯ್ಯದ್ ರಿಯಾಜುದ್ದಿನ್ ಮುಂದೆ ಬಂದಿರುವುದು ಶ್ಲಾಘನೀಯ ಮತ್ತು ಇವರ ಧೈರ್ಯ ಮೆಚ್ಚುವಂಥದ್ದು. ಜರ್ಬೆರಾ ನಾಟಿ ಮಾಡಿದ 90-100 ದಿನಗಳ ಬಳಿಕ ಕಟಾವು ಪ್ರಾರಂಭವಾಗಲಿದ್ದು, ಸುಮಾರು 3 ವರ್ಷಗಳವರೆಗೆ ಲಾಭ ಪಡೆಯಬಹುದು. ಕಲಬುರಗಿ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯ ಕೃಷಿಭಾಗ್ಯ ಯೋಜನೆಯಡಿ ಕಳೆದ ಎರಡು ವರ್ಷಗಳಲ್ಲಿ 34 ನ್ಯಾಚುರಲಿ ವೆಂಟಿಲೇಟೆಡ್ ಪಾಲಿ ಹೌಸ್ ಮತ್ತು 110 ಶೆಡ್ ನೆಟ್ ಪಾಲಿ ಹೌಸ್ ಘಟಕಗಳು ಸೇರಿದಂತೆ ಒಟ್ಟು 144 ಘಟಕಗಳಿಗೆ ಕಾರ್ಯಾದೇಶ ನೀಡಲಾಗಿದೆ. ಈ ಪೈಕಿ 23 ಪಾಲಿ ಹೌಸ್ ಮತ್ತು 66 ನೆರಳು ಪರದೆ ಘಟಕಗಳು ಸೇರಿ 89 ಘಟಕಗಳ ನಿರ್ಮಾಣ ಕಾರ್ಯ ಮುಗಿದಿದೆ. ತೋಟಗಾರಿಕೆ ಇಲಾಖೆಯಿಂದ 2016ರ ಜನವರಿಯಿಂದ ಕೃಷಿಭಾಗ್ಯ ಯೋಜನೆಯಡಿ ನಿರಂತರ 4 ವರ್ಷ ಕಾಲ ಸತತವಾಗಿ ಬರಗಾಲಕ್ಕೆ ತುತ್ತಾದ ರಾಜ್ಯದ 7 ಜಿಲ್ಲೆಗಳ 23 ತಾಲೂಕುಗಳ ಪೈಕಿ ಕಲಬುರಗಿ ಜಿಲ್ಲೆಯ ಆಳಂದ, ಚಿಂಚೋಳಿ ಮತ್ತು ಜೇವರ್ಗಿ ತಾಲೂಕುಗಳ ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಶೇ.90ರಷ್ಟು ಹಾಗೂ ಇತರರಿಗೆ ಶೇ.75ರಷ್ಟು ಸಹಾಯಧನ ನೀಡಲಿದೆ. ಉಳಿದ ತಾಲೂಕುಗಳ ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಶೇ.90ರಷ್ಟು ಹಾಗೂ ಇತರರಿಗೆ ಶೇ.50ರಷ್ಟು ಸಹಾಯಧನ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಡಿ.ಮಂಜುನಾಥ ಹೇಳುತ್ತಾರೆ. ಜಿ.ಚಂದ್ರಕಾಂತ ಹಿರಿಯ ಸಹಾಯಕ ನಿರ್ದೇಶಕ ಕಲಬುರಗಿ *****
FEATURE ID 5
Untitled Page
Connect with us Twitter YouTube Face book Instagram