ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
home  Printer friendly Page home  Email this page
English Features
Month Year
  • ತೋಟಗಾರಿಕೆ ಇಲಾಖೆಯ ನೆರವು ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಬರದಲ್ಲೂ ಬಂಪರ್ ಕಲ್ಲಂಗಡಿ ಬೆಳೆ   14-March,2017
 
Department of Kannada Culture & Information

ಬಾಪೂಜಿಗೆ ಬಳ್ಳಾರಿಗರಿಂದ ಭರಪೂರ್ ಸ್ಪಂದನೆ
3ನೇ ಸ್ಥಾನ ಪಡೆದ ಬಳ್ಳಾರಿ*ಮುಂದಿನ ದಿನಗಳಲ್ಲಿ ಏರ್,ರೈಲ್ವೆ,ಬಸ್ ಟಿಕೆಟ್ ಲಭ್ಯ... ಬಾಪೂಜಿಗೆ ಬಳ್ಳಾರಿಗರಿಂದ ಭರಪೂರ್ ಸ್ಪಂದನೆ: ಬಳ್ಳಾರಿ: ಒಂದೇ ಸೂರಿನಡಿ ಸಕಲ ಸೇವೆಯ ಭಾಗ್ಯ ಒದಗಿಸುವ ಬಾಪೂಜಿಗೆ ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಭರಪೂರ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾನಾ ಪ್ರಮಾಣಪತ್ರಗಳಿಗಾಗಿ ಹಳ್ಳಿ ಜನರು ನಾಡ ಮತ್ತು ತಾಲೂಕು ಕಚೇರಿಗಳಿಗೆ ಅಲೆಯುವುದಕ್ಕೆ ಬೈ ಹೇಳಿದ್ದ್ದು, ಗ್ರಾಪಂ ಮಟ್ಟದಲ್ಲಿ ಸ್ಥಾಪನೆಯಾಗಿರುವ ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಸರಕಾರ ಜಾರಿಗೆ ತಂದಿರುವ ಈ ಬಾಪೂಜಿ ಸೇವಾ ಕೇಂದ್ರಗಳ ಕ್ರಮಕ್ಕೆ ಜಿಲ್ಲೆಯ ಜನರು ಅದರಲ್ಲೂ ವಿಶೇಷವಾಗಿ ರೈತಾಪಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದುವರೆಗೆ 4 ಸಾವಿರಕ್ಕೂ ಹೆಚ್ಚು ಪಹಣಿ ಪ್ರಮಾಣಪತ್ರ ಹಾಗೂ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ನಾನಾ ಪ್ರಮಾಣಪತ್ರಗಳನ್ನು ಜಿಲ್ಲೆಯಲ್ಲಿ ಜು.2ರಿಂದ ಗ್ರಾಮೀಣ ಭಾಗದ ಜನರು ಪಡೆದುಕೊಳ್ಳುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಈ ಪ್ರಮಾಣಪತ್ರಗಳು ಪಡೆದುಕೊಳ್ಳುತ್ತಿರುವುದು ಜೋರಾಗಿದೆ. ಜಿಲ್ಲೆಯಲ್ಲಿರುವ 199 ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಆರಂಭವಾಗಿದ್ದು, ಪಹಣಿ ಹಾಗೂ ಕಂದಾಯ ಇಲಾಖೆಯ 39 ನಾನಾ ಪ್ರಮಾಣಪತ್ರಗಳು, ಗ್ರಾಮೀಣಾಭಿವೃದ್ಧಿ ಇಲಾಖೆಯ 43 ಸೇವೆಗಳು ಮತ್ತು 17 ಇತರೇ ಸೇವೆಗಳು ಸೇರಿದಂತೆ 100 ಸೇವೆಗಳನ್ನು ಒಂದೇ ಸೂರಿನಡಿ ಪಡೆದುಕೊಳ್ಳುತ್ತಿದ್ದಾರೆ. ಬಾಪೂಜಿ ಸೇವಾ ಕೇಂದ್ರದ ಪರಿಣಾಮಕಾರಿ ಅನುಷ್ಠಾನದ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಮುತುವರ್ಜಿ ತೋರಿದ ಪರಿಣಾಮ ಬಳ್ಳಾರಿ ಇಡೀ ರಾಜ್ಯದಲ್ಲಿ 3ನೇ ಸ್ಥಾನ ಪಡೆದಿದೆ. ಮೊದಲನೇ ಸ್ಥಾನ ಹಾವೇರಿ ಮತ್ತು ಎರಡನೇ ಸ್ಥಾನ ಗದಗ ಜಿಲ್ಲೆಗಳು ಪಡೆದುಕೊಂಡಿವೆ. ಗ್ರಾಪಂನಲ್ಲಿ ಆರಂಭವಾಗಿರುವ ಬಾಪೂಜಿ ಸೇವಾ ಕೇಂದ್ರದ ತಂತ್ರಾಂಶದೊಂದಿಗೆ ನಾಡಕಚೇರಿ ತಂತ್ರಾಂಶ ಮತ್ತು ಭೂಮಿ ತಂತ್ರಾಂಶವನ್ನು ಸಮಗ್ರೀಕರಣಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ವಿವರಿಸುತ್ತಾರೆ. ನಮ್ಮೂರಿಂದ ಬಳ್ಳಾರಿಗೆ ಹೋಗಿ ತಾಲೂಕು ಕಚೇರಿ ಮುಂದೆ ಪಾಳಿಯಲ್ಲಿ ನಿಂತು ಪಹಣಿ ಪಡೆಯಬೇಕಾಗುತ್ತಿತ್ತು. ಒಂದೊಂದು ಬಾರಿ ಸರ್ವರ್ಡೌನ್ ಸಮಸ್ಯೆಯಿಂಗಿ ಹಾಗೇ ಮರಳಿ ಬರಬೇಕಾಗುತ್ತಿತ್ತು. ಈಗ ಸರಕಾರ ನಮ್ಮೂರಲ್ಲಿಯೇ ಪಹಣಿ ಸೇರಿದಂತೆ ನಾನಾ ಪ್ರಮಾಣಪತ್ರ ವಿತರಿಸುತ್ತಿರುವುದು ಖುಷಿ ತಂದಿದೆ ಎಂದು ಕೊಳಗಲ್ಲುವಿನಲ್ಲಿ ಬಾಪೂಜಿ ಸೇವಾ ಕೇಂದ್ರದ ಪ್ರಯೋಜನ ಪಡೆದ ದಂಡ ಬಸವರೆಡ್ಡಿ, ಫಾಲಾಕ್ಷಪ್ಪ ಮತ್ತು ಎಚ್.ಮಲ್ಲೇಶಪ್ಪ ಎನ್ನುವ ರೈತರು ಸಂತಸ ಹಂಚಿಕೊಳ್ಳುತ್ತಾರೆ. ಈ ಕೇಂದ್ರಗಳಿಗೆ ನೆಟ್ ಸಂಪರ್ಕ ಕಲ್ಪಿಸಲಾಗಿದ್ದು, ಸಿಸಿ ಕ್ಯಾಮೆರಾ ಸಹ ಅಳವಡಿಸಲಾಗಿದೆ. ಸೇವೆಗಳನ್ನು ಜನರಿಗೆ ಸಮರ್ಪಕವಾಗಿ ಒದಗಿಸುವುದಕ್ಕಾಗಿ ಡಾಟಾ ಎಂಟ್ರಿ ಅಪರೇಟರ್ ನೇಮಕ ಮಾಡಲಾಗಿದೆ. ಪ್ರತಿನಿತ್ಯ ಪಿಡಿಒ ಮತ್ತು ಗ್ರಾಮಲೆಕ್ಕಿಗ ಈ ಕೇಂದ್ರಗಳಿಗೆ ತೆರಳಿ ಪರಿಶೀಲಿಸಿ, ಸಮಸ್ಯೆಗಳಿದ್ದಲ್ಲಿ ಬಗೆಹರಿಸುವಂತೆ ಸೂಚಿಸಲಾಗಿದೆ ಎಂದು ಸಹಾಯಕ ಆಯುಕ್ತ ಲೋಕೇಶ ತಿಳಿಸುತ್ತಾರೆ. *ಯಾವ್ಯಾವ ಸೇವೆಗಳು ಲಭ್ಯ: ಪಹಣಿ,ಜನಸಂಖ್ಯೆ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಹಿಂದುಳಿದ ವರ್ಗಗಳ ಪ್ರಮಾಣಪತ್ರ,ವಾಸಸ್ಥಳ, ಆದಾಯ ದೃಢೀಕರಣ, ಜೀವಂತ ದೃಢೀಕರಣ, ಜಮೀನು ಇಲ್ಲದಿರುವ ಪತ್ರ,ಕೃಷಿ ಕಾರ್ಮಿಕ ದೃಢೀಕರಣ ಪತ್ರ, ಭೂ ಹಿಡುವಳಿ ಪ್ರಮಾಣಪತ್ರ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ, ಮೈತ್ರಿ,ಮನಸ್ವಿನಿ,ವೃದ್ಧಾಪ್ಯ ವೇತನ, ಬೆಳೆ ದೃಢೀಕರಣ ಪತ್ರ, ವಸತಿ ಮತ್ತು ವಾಣಿಜ್ಯ ಕಟ್ಟಡ ಅನುಮತಿ ವಿತರಣೆ, ತೆರಗಿ ನಿರ್ಧಾರಣ ಪಟ್ಟಿ ವಿತರಣೆ, ನೀರಿನ ಸಂಪರ್ಕ ಕಡಿತ, ಕೊಳವೆ ಬಾವಿ ನಿರ್ಮಾಣದ ವಿವರ ತಿಳಿಸುವುದು, ಸ್ವಚ್ಛ ಭಾರತ ಮಿಶನ್ ಅರ್ಜಿ, ಜೈವಿಕ ಅನಿಲ ಅರ್ಜಿ, ಖಾತ್ರಿ ಜಾಬ್ಕಾರ್ಡ್ ವಿತರಣೆ, ನೀರಿನ ಶುಲ್ಕ ಪಾವತಿ, ಕುಡಿಯುವ ನೀರಿನ ನಿರ್ವಹಣೆ ಸೇರಿದಂತೆ ಕಂದಾಯ ಇಲಾಖೆಯ 39 ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ 43 ಸೇವೆಗಳು. * ಇನ್ನೂ ಕೆಲ ದಿನಗಳಲ್ಲಿ ಮೊಬೈಲ್ ರಿಚಾರ್ಜ್ ಸೇವೆಯೂ ಲಭ್ಯ: ವಿದ್ಯುತ್ ಬಿಲ್, ದೂರವಾಣಿ ಬಿಲ್, ಜೀವವಿಮೆ, ವಾಹನನ ವಿಮೆ, ಮೊಬೈಲ್ ರಿಚಾರ್ಜ್, ಡಿಟಿಎಚ್ ರಿಚಾರ್ಜ್,ಡೇಟಾ ಕಾರ್ಡ್ ರಿಚಾರ್ಜ್,ಬಸ್,ರೈಲ್ವೆ ಮತ್ತು ಏರ್ಟಿಕೆಟ್ ಬುಕಿಂಗ್, ಆಧಾರ್,ಮತದಾರರ ಗುರುತಿನ ಚೀಟಿ, ಜಾಬ್ ಮಾಹಿತಿ, ಪಡಿತರ ಚೀಟಿ, ಹಣ ವರ್ಗಾವಣೆ, ವಿದ್ಯಾರ್ಥಿ ವೇತನ, ಪರವಾನಿಗೆಯ ಶುಲ್ಕ. ------- ಕೋಟ್-1 ರಾಜ್ಯದ 4 ಸಾವಿರ ಗ್ರಾಪಂಗಳಲ್ಲಿ ಬಾಪೂಜಿ-100 ಸೇವಾ ಕೇಂದ್ರಗಳನ್ನು ಆ.15ರಿಂದ ಆರಂಭಿಸಲಾಗಿದೆ. ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಈ ಸೇವಾ ಕೇಂದ್ರಗಳಲ್ಲಿ ಕಂದಾಯ ಇಲಾಖೆಯ 40, ಆರ್ಡಿಪಿಆರ್ನ 43 ಹಾಗೂ ಸರಕಾರದ ಅಂಗಸಂಸ್ಥೆಯ ವಿವಿಧ ಇಲಾಖೆಗಳ 17 ಸೇವೆ ಸೇರಿದಂತೆ ಒಟ್ಟು 100 ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ. ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಇ-ಆಫೀಸ್ ಸೇವೆ ಅಳವಡಿಸುವ ಮೂಲಕ ಕಾಗದ ರಹಿತವಾಗಿ ಆಡಳಿತ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಕೆಲ ಗ್ರಾಪಂಗಳಲ್ಲಿ ಇದು ಜಾರಿಗೊಂಡಿದೆ- ಎಚ್.ಕೆ.ಪಾಟೀಲ್, ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಕರ್ನಾಟಕ ಸರಕಾರ ---- -ವಿಶೇಷ ವರದಿ, ರಾಮಲಿಂಗಪ್ಪ ಬಿ.ಕೆ. ಹಿರಿಯ ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಳ್ಳಾರಿ. ==================================
FEATURE ID 6
Untitled Page
Connect with us Twitter YouTube Face book Instagram