ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
General08-ಸೆಪ್ಟೆಂಬರ್, 2017 17:23 IST

ಸಂಪೂರ್ಣ ಬಯಲು ಬಹಿರ್ದೆಸೆಮುಕ್ತ ಜಿಲ್ಲೆ ಘೋಷಣೆಗೆ ಶಿವಮೊಗ್ಗ ಸಿದ್ಧತೆ
ಶಿವಮೊಗ್ಗ, ಸೆ.8 (ಕರ್ನಾಟಕ ವಾರ್ತೆ): ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಬಹಿರ್ದೆಸೆಯನ್ನು ಇಲ್ಲವಾಗಿಸುವ ಮೂಲಕ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆಮುಕ್ತ ಜಿಲ್ಲೆಯೆಂದು ಘೋಷಿಸಲು ಕ್ಷಣಗಣನೆ ಆರಂಭವಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಕೊಳಕು, ಗಲೀಜು, ಮಲ, ಮೂತ್ರ, ದುರ್ನಾತ ಮುಂತಾದ ರೀತಿಯ ಅನೈರ್ಮಲ್ಯಗಳನ್ನು ಇನ್ನಿಲ್ಲದಂತೆ ಮಾಡಿ, ಸಂಪೂರ್ಣ ಸ್ವಚ್ಚವಾದ, ಶುದ್ಧವಾದ ವಾತಾವರಣ ಕಲ್ಪಿಸಿಕೊಳ್ಳಲು ಅನುಷ್ಠಾನಕ್ಕೆ ಬಂದಿರುವ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆಯಡಿ ಅಕ್ಟೋಬರ್ 02ರ ಗಾಂಧಿಜಯಂತಿಯಂದು ಶಿವಮೊಗ್ಗ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಜಿಲ್ಲಾ ಪಂಚಾಯಿತಿ ಸಕಲ ಸಿದ್ದತೆ ನಡೆಸಿದೆ. ಈ ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಸಂದರ್ಭ ಅಂದರೆ, 2022ರ ವೇಳೆಗೆ ಶೇ.100ರಷ್ಟು ಪ್ರಗತಿಯನ್ನು ಸಾಧಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆ ಅವಧಿಗೂ ಮುನ್ನವೇ ನಿಗಧಿಪಡಿಸಿದ ಗುರಿ ಮೀರಿದ ಸಾಧನೆ ಮಾಡಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ನೈರ್ಮಲ್ಯ ಯೋಜನೆಯಡಿ 2012ರಲ್ಲಿ ಸ್ಥಳೀಯವಾಗಿ ನಡೆಸಿದ ಸರ್ವೇಯಲ್ಲಿ ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 2,69,430ಕುಟುಂಬಗಳಿದ್ದು, ಅವುಗಳ ಪೈಕಿ 81,411ಕುಟುಂಬಗಳಿಗೆ ಶೌಚಾಲಯವಿಲ್ಲದಿರುವುದನ್ನು ಗುರುತಿಸಲಾಯಿತು. ಈ ಸರ್ವೇಯಲ್ಲಿ ಗುರುತಿಸಲಾದ ಬಿ.ಪಿ.ಎಲ್. ಕುಟುಂಬ ಮತ್ತು ಎ.ಪಿ.ಎಲ್. ಕುಟುಂಬದ ವ್ಯಾಪ್ತಿಗೊಳಪಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿಸಣ್ಣ ರೈತರು, ಮಹಿಳಾ ಪ್ರಧಾನ ಕುಟುಂಬ, ಭೂರಹಿತ ಕಾರ್ಮಿಕರು ಹಾಗೂ ಅಂಗವಿಕಲರನ್ನೊಳಗೊಂಡಂತೆ ಪ್ರತಿ ಫಲಾನುಭವಿಯ ಕುಟುಂಬಕ್ಕೆ ಶೌಚಾಲಯ ಕಟ್ಟಿಕೊಳ್ಳುವಂತೆ, ಶೌಚಾಲಯ ಕಟ್ಟಿಕೊಳ್ಳಲು ಉದ್ಯೋಗ ಖಾತ್ರಿ ಮತ್ತು ನಿರ್ಮಲ ಭಾರತ ಯೋಜನೆಯಡಿ ಆರ್ಥಿಕ ಸಹಾಯಧನ ಕೂಡ ನೀಡಲಾಯಿತು. ಪ್ರಸ್ತುತ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಒಟ್ಟು ರೂ.12 ಸಾವಿರ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ರೂ.3ಸಾವಿರ ಹೆಚ್ಚುವರಿ ಅನುದಾನವನ್ನು ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ನೀಡುತ್ತಿದೆ. ಸ್ವಚ್ಚ ಭಾರತ ಯೋಜನೆಯಡಿ ಹೆಚ್ಚು ಜನಸಂದಣಿಯ ಸಾರ್ವಜನಿಕ ಸ್ಥಳಗಳಾದ ಬಸ್ನಿಲ್ದಾಣ, ಸಂತೆ ಮಾರಕಟ್ಟೆ ಸ್ಥಳಗಳಲ್ಲಿ ನಿರ್ಮಿಸಲಾಗುವ ಸಮುದಾಯ ಶೌಚಾಲಯಗಳಿಗೆ ರೂ.2ಲಕ್ಷ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆಗನುಗುಣವಾಗಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಾಲಾ ಶೌಚಾಲಯ ನಿರ್ಮಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಸಮೀಕರಿಸಿ ಒಟ್ಟು ರೂ.70ಸಾವಿರ ಹಾಗೂ ಅಂಗನವಾಡಿ ಮಕ್ಕಳಿಗೆ ಶಿಶುಸ್ನೇಹಿ ಶೌಚಾಲಯ ನಿರ್ಮಾಣಕ್ಕೆ ಸ್ವಚ್ಚ ಭಾರತ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಸಮೀಕರಿಸಿ ಒಟ್ಟು ರೂ.16ಸಾವಿರ ನೀಡಲಾಗುತ್ತದೆ. ``ಜಿಲ್ಲೆಯಲ್ಲಿ ಎಲ್ಲರೂ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಪ್ರೇರೇಪಿಸಲು ಪ್ರತಿ ಪಂಚಾಯಿತಿ ಕೇಂದ್ರಗಳಿಗೆ ಮಾಸಿಕ ಗುರಿ ನಿಗಧಿಪಡಿಸಲಾಗಿತ್ತು. ಆದರೂ ಶೌಚಾಲಯ ಕಟ್ಟಿಸಿಕೊಳ್ಳಲು ಮುಂದಾದವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಸಂಘಟಿತವಾದ ಈ ಎಲ್ಲಾ ಪ್ರಯತ್ನಗಳ ಫಲವಾಗಿ 2013-14ನೇ ಸಾಲಿನಲ್ಲಿ 12,681, 2014-15ರಲ್ಲಿ 30,211, 2015-16ರಲ್ಲಿ 20,127, 2016-17ರಲ್ಲಿ 27,056 ಹಾಗೂ 2017-18ರಲ್ಲಿ 23,023ಶೌಚಾಲಯಗಳು ಸೇರಿದಂತೆ ಈವರೆಗೆ ಒಟ್ಟು 92,184ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಕಳೆದ ಸಾಲಿನಲ್ಲಿ 34ಕೋಟಿ ಹಾಗೂ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ 8.00ಕೋಟಿ ರೂ.ಗಳಲ್ಲಿ ಈಗಾಗಲೇ 4.25ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಈ ಎಲ್ಲಾ ಅವಿರತ ಪ್ರಯತ್ನಗಳ ನಂತರ ಶೌಚಾಲಯರಹಿತ ಕುಟುಂಬಗಳನ್ನು ಗುರುತಿಸಲು ಅಂತರ ತಾಲೂಕು ಮಟ್ಟದ ಮೌಲ್ಯಮಾಪನ ನಡೆಸಲಾಗುತ್ತಿದೆ. ಇದಾದ ನಂತರ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ, ನಿರ್ಣಯ ಕೈಗೊಂಡು ಸಾಮಾಜಿಕ ಪರಿಶೀಲನೆ ನಡೆಸಿ, ಶೌಚಾಲಯ ರಹಿತರ ಮನೆಗೆ ಭೇಟಿ ನೀಡಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದಾದ ನಂತರ ಅಂತರ ಜಿಲ್ಲಾ ಮಟ್ಟದ ಮೌಲ್ಯಮಾಪನ ನಡೆಸಲಾಗುವುದು. ಪ್ರಧಾನಿಯವರ ಒತ್ತಾಸೆಯಂತೆ ದೇಶದ ಹಲವು ದಿಗ್ಗಜರ ಬೆಂಬಲ ಹಾಗೂ ಪೂರಕ ಸ್ಪಂದನೆಗಳಿಂದ ಈ ಅಭಿಯಾನ ಮತ್ತುಷ್ಟು ಚುರುಕುಗೊಂಡಿತು. ಸಾರ್ವಜನಿಕ ವಲಯದಲ್ಲೂ ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತವಾಗಿರುವುದು ಸರ್ವವೇದ್ಯ.
(Release ID 582)