ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಛಾಯಾಚಿತ್ರ ಆಮಂತ್ರಣ ನುಡಿಚಿತ್ರ home Home
State Releases District Releases Photos Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • Department of Energy
  • ರಾಜ್ಯದಲ್ಲಿ 184 ಟ್ರಾನ್ಸ್ಫಾರ್ಮರ್ ಬ್ಯಾಂಕ್: ಸಚಿವ ಡಿ.ಕೆ.ಶಿವಕುಮಾರ್  
  • Department of Public Works (PWD)
  • ಹೆದ್ದಾರಿ ಪಕ್ಕ ಕಟ್ಟಡ ನಿರ್ಮಿಸುವಾಗ ಷರತ್ತು ಪಾಲನೆ ಕಡ್ಡಾಯ: ಸಚಿವ ಡಾ.ಎಚ್.ಸಿ.ಮಹದೆವಪ್ಪ  

 
General11-ಸೆಪ್ಟೆಂಬರ್, 2017 17:33 IST

ನಿಗಧಿಪಡಿಸಿದ ಪ್ರದೇಶದಲ್ಲಿ ಮಾತ್ರ ಮರುಳುಗಾರಿಕೆ- ಪ್ರಮೋದ್
ಉಡುಪಿ, ಸೆಪ್ಟಂಬರ್ 11 (ಕರ್ನಾಟಕ ವಾರ್ತೆ):- ಜಿಲ್ಲೆಯ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಮುದ್ರದಲ್ಲಿ ದೋಣಿಗಳು ಸಂಚರಿಸಲು ಅಡ್ಡಿಯಾಗಿರುವ ಮರುಳು ದಿಬ್ಬಗಳನ್ನು ಮಾತ್ರ ತೆಗೆಯಲು ಅವಕಾಶ ನೀಡಲಾಗಿದೆ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಅವರು ಸೋಮವಾರ, ರಜತಾದ್ರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಮಾತನಾಡಿದರು. ಸಮುದ್ರದಲ್ಲಿ ಎನ್.ಐ.ಟಿ.ಕೆ ಯ ತಜ್ಞರ ತಂಡದಿಂದ ದೋಣಿಗಳ ಸಂಚರಿಸಲು ಅಡ್ಡಿಯಾಗಿರುವ ಮರಳು ದಿಬ್ಬಗಳನ್ನು ಗುರುತಿಸಲಾಗಿದ್ದು, ಗುರುತಿಸಿರುವ ಪ್ರದೇಶದಲ್ಲಿ ಮಾತ್ರ ಮರಳು ತೆಗೆಯಲು ಅನುಮತಿ ನೀಡಲಾಗಿದೆ ಹಾಗೂ ತೆಗೆಯುವ ಮರಳನ್ನು ಜಿಲ್ಲೆಯ ಉಪಯೋಗಕ್ಕೆ ಮಾತ್ರ ಬಳಸುವಂತೆ ಮತ್ತು ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೊರಗೆ ಸಾಗಿಸದಂತೆ ಸಚಿವರು ಸೂಚಿಸಿದರು. ಮರಳುಗಾರಿಕೆಗೆ ತೆರಳುವ ದೋಣಿಗಳಿಗೆ ಜಿಪಿಎಸ್ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಹಾಗೂ ತಮಗೆ ಅವಕಾಶ ನೀಡಿದ ಪ್ರದೇಶ ಬಿಟ್ಟು ಬೇರೆಡೆಯಲ್ಲಿ ಮರಳು ತಗೆಯದಂತೆ ಸಚಿವರು ಸೂಚಿಸಿದರು, ಜಿಪಿಎಸ್ ಅಳವಡಿಕೆಯಿಂದ ಮರಳುಗಾರಿಕೆಯ ಪ್ರತಿಯೊಂದು ಮಾಹಿತಿ ಲಭ್ಯವಾಗಲಿದ್ದು, ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು. ಮರಳು ತೆಗೆಯಲು ಪರ್ಮಿಟ್ ಪಡೆದಿರುವ ಪ್ರತಿಯೊಬ್ಬರಿಗೂ ಜಿಪಿಎಸ್ ಅಳವಡಿಕೆ ಕುರಿತು ಮಾಹಿತಿ ನೀಡಿದ ಹಾಗೂ ರಾಷ್ಟ್ರೀಯ ಹಸಿರು ಪೀಠ ಹಾಕಿರುವ ಷರತ್ತುಗಳ ಅನ್ವಯ ಮರಳುಗಾರಿಕೆ ನಡೆಸುವಂತೆ ಎಲ್ಲಾ ಪರ್ಮಿಟ್ ದಾರರಿಗೆ ಸೂಚಿಸಿದ ಸಚಿವರು, ನಿಯಮಗಳನ್ನು ಉಲ್ಲಂಘಿಸಿದಲ್ಲಿ ಹಸಿರು ಪೀಠದಿಂದ ಜಿಲ್ಲೆಯಲ್ಲಿ ಮರುಳುಗಾರಿಕಗೆ ತಡೆಯಾಜ್ಞೆ ಬರಲಿದೆ ಎಂದು ಹೇಳಿದರು. ತಾವು ಜಿಲ್ಲೆಯ ಜನತೆಯ ಹಿತಕ್ಕಾಗಿ ಮತ್ತು ಪರಿಸರ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು, ವೃಥಾ ಆರೋಪಗಳ್ನು ಮಾಡಬೇಡಿ , ಜಿಲ್ಲೆಯಲ್ಲಿ ಮರಳುಗಾರಿಕಾ ವಾಹನಗಳಿಗೆ ಮತ್ತು ದೋಣಿಗಳಿಗೆ ಜಿಪಿಎಸ್ ಅಳವಡಿಸಲು ಟೆಲಿಮ್ಯಾಟಿಕ್ಸ್ ಫಾರ್ ಯು ಸರ್ವಿಸ್ ಪ್ರೈ ಲಿ. ಕಂಪೆನಿಗೆ ಟೆಂಡರ್ ಪಡೆದಿದ್ದು,ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಯಶಸ್ವಿಯಾಗಿ ಜಿಪಿಎಸ್ ಅಳವಡಿಸಿ ಮರಳುಗಾರಿಕೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ , ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಾಧಿಕಾರಿ ಕೋದಂಡ ರಾಮ ಉಪಸ್ಥಿತರಿದ್ದರು.
(Release ID 584)