ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
Department of Women and Child Development12-ಸೆಪ್ಟೆಂಬರ್, 2017 17:45 IST

ಬದುಕಿಗೆ ನೆಮ್ಮದಿ ನೀಡಿದ “ಸಮೃದ್ಧಿ ಯೋಜನೆ”
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಶಕ್ತ ಮಹಿಳೆಯರಿಗೆ ಚೇತನ, ಸಮೃದ್ಧಿ, ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಸೇರಿದಂತೆ ಇನ್ನೂ ಹಲವಾರು ಯೋಜನೆಗಳ ಮೂಲಕ ಆರ್ಥಿಕ ನೆರವನ್ನು ಒದಗಿಸಿ ಅಶಕ್ತ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿ ಅವರು ತಮ್ಮ ಕುಟುಂಬಗಳಿಗೆ ಆಧಾರವಾಗಿ ಸಮಾಜಕ್ಕೆ ಹೊರೆಯಾಗದ ಮಾದರಿ ಬದುಕು ನಡೆಸುತ್ತಿದ್ದಾರೆ. ಇಂತಹ ಮಾದರಿ ಬದುಕು ನಡೆಸುತ್ತಿರುವವರಲ್ಲಿ ತುರುವೇಕೆರೆ ವಿನೋಬಾ ನಗರದ ಟಿ.ಜೆ.ಪದ್ಮಾವತಿಯವರು ಸಮೃದ್ಧಿ ಯೋಜನೆಯಲ್ಲಿ ನೀಡುವ ರೂ. 10,000/- ಪ್ರೋತ್ಸಾಹ ಧನದಲ್ಲಿ ಹಣ್ಣು, ತರಕಾರಿ ವ್ಯಾಪಾರವನ್ನು ದುಪ್ಪಟ್ಟು ಮಾಡಿಕೊಂಡು ಇಂದು ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಟಿ.ಜೆ. ಪದ್ಮಾವತಿಯವರು ವಿಧವೆಯಾಗಿದ್ದು, ತಮ್ಮ ಪತಿಯ ಅಕಾಲಿಕ ಮರಣದ ನಂತರ ಸಂಸಾರ ನಡೆಸಲು ಕಂಡುಕೊಂಡದ್ದು ಬೀದಿ ಬದಿಯಲ್ಲಿ ಹಣ್ಣು, ತರಕಾರಿ ವ್ಯಾಪಾರ. ಇವರು ಹಣ್ಣು ತರಕಾರಿ ವ್ಯಾಪಾರಕ್ಕಾಗಿ ದಿನಬಡ್ಡಿ ಆಧಾರದಲ್ಲಿ ಇತರರಿಂದ ಸಾಲ ಪಡೆದು ವ್ಯಾಪಾರ ನಡೆಸುತ್ತಾ ಬಂದ ಲಾಭದಲ್ಲಿ ಸಾಲದ ಬಡ್ಡಿ ನೀಡಿ ತಮ್ಮ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೂ ವೆಚ್ಚ ಮಾಡಬೇಕಿತ್ತು. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಸಹಾಯಕಿ ಮತ್ತು ಮೇಲ್ವಿಚಾರಕಿಯರ ಸಲಹೆ ಪಾಲಿಸಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಬೀದಿ ಬದಿ ವ್ಯಾಪಾರಸ್ಥರಿಗೆ ನೀಡುವ ಪ್ರೋತ್ಸಾಹಧನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಟಿ.ಜೆ.ಪದ್ಮಾವತಿಯವರಿಗೆ ತುರುವೇಕೆರೆ ಪುರಸಭೆ ವತಿಯಿಂದ ಬೀದಿ ವ್ಯಾಪಾರಸ್ಥೆ ಎಂಬುದಾಗಿ ಗುರುತಿನ ಚೀಟಿ ನೀಡಿದ್ದು, ಇದರ ನೆರವಿನಿಂದ 2016-17ನೇ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ರೂ. 10 ಸಾವಿರ ಪ್ರೋತ್ಸಾಹ ಧನವನ್ನು ಮಂಜೂರಾತಿ ಪಡೆದುಕೊಂಡರು. ಈ ಪ್ರೋತ್ಸಾಹ ಧನದಿಂದ ಪದ್ಮಾವತಿ ತಮ್ಮ ವ್ಯಾಪಾರಕ್ಕೆ ಇನ್ನೂ ಹೆಚ್ಚಿನ ಬಂಡವಾಳ ಹೂಡಿ ತಮ್ಮ ದಿನನಿತ್ಯ ವ್ಯಾಪಾರವನ್ನು ರೂ. 3 ಸಾವಿರಗಳಿಂದ ಇಂದು ರೂ.10 ಸಾವಿರಗಳಿಗೆ ಹೆಚ್ಚಿಸಿಕೊಂಡಿದ್ದಾರೆ. ಪದ್ಮಾವತಿಯವರು ಪತಿಯಿಲ್ಲ ಎಂದು ದುಃಖತಪ್ತರಾಗಿ ಕೂರದೇ ಅದಮ್ಯ ಇಚ್ಛೆಯಿಂದ ಶ್ರದ್ಧೆ ಪರಿಶ್ರಮದಿಂದ ತರಕಾರಿ ವ್ಯಾಪಾರ ಮಾಡುತ್ತಾ ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಂಡು ತಮ್ಮ ಮಗನನ್ನು ಎಸ್.ಎಸ್.ಎಲ್.ಸಿ. ಓದಿಸುತ್ತಾ ಮಗಳನ್ನು 6ನೇ ತರಗತಿ ಓದಿಸುತ್ತಾ ಮಾದರಿ ಜೀವನ ಸಾಗಿಸುತ್ತಿರುವ ಇವರು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಆರ್ಥಿಕ ನೆರವು ದೊರಕಿದ ಬಗ್ಗೆ ತಮ್ಮ ಮನದುಂಬಿ ಅಭಿನಂದನೆ ಸಲ್ಲಿಸುವುದನ್ನು ಮರೆಯುವುದಿಲ್ಲ.
(Release ID 587)