ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಛಾಯಾಚಿತ್ರ ಆಮಂತ್ರಣ ನುಡಿಚಿತ್ರ home Home
State Releases District Releases Photos Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • Department of Health & Family Welfare
  • ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ: ಜಿಲ್ಲಾ ಉಸ್ತುವಾರಿ ಸಚಿವರಾದ ಗೀತ ಮಹದೇವಪ್ರಸಾದ್   

 
Department of Home23-ನವೆಂಬರ್, 2017 17:29 IST

ಪೊಲೀಸ್ ತನಿಖೆ ತರಬೇತಿಗೆ ವಿ.ವಿ ಮಾದರಿ ಸಂಸ್ಥೆ ಆರಂಭಿಸಲು ಚಿಂತನೆ-:ಸಚಿವ ರಾಮಲಿಂಗಾರೆಡ್ಡಿ
ಬೆಳಗಾವಿ, ನ.23 (ಕರ್ನಾಟಕ ವಾರ್ತೆ): ಗೃಹ ಇಲಾಖೆಯಲ್ಲಿ ಆಧುನಿಕ ತಂತ್ರಾಜ್ಞಾನ ಅಳವಡಿಕೆ ಮಾಡಿಕೊಂಡು ಕಾನ್ಸ್ಟೇಬಲ್ ದರ್ಜೆಯಿಂದ ಹಿಡಿದ್ದು, ಐಪಿಎಸ್ ವೃಂದದ ವರಗಿನ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೈಬರ್ ಕ್ರೈಂ, ಮೊಬೈಲ್ ಫೊರೆನ್ಸಿಕ್, ಗುಪ್ತಚರಣ ಸಂಗ್ರಹಣೆ, ವಿಚಾರಣೆ ತಂತ್ರಗಾರಿಕೆ, ಸಂಚಾರ ನಿರ್ವಹಣೆ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲು ವಿಶ್ವವಿದ್ಯಾಲಯದ ಮಾದರಿಯ ಸಂಸ್ಥೆಯನ್ನು ಆರಂಭಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು. ವಿಧಾನ ಪರಿಷತ್ನಲ್ಲಿಂದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ತಾರಾಅನುರಾಧ ಅವರು ಕೆಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿಯನ್ನು ನೀಡಿದರು. ಪೊಲೀಸ್ ಇಲಾಖೆಯನ್ನು ಆಧುನಿಕರಣಗೊಳಿಸಲು ಬೆಂಗಳೂರು ನಗರದಲ್ಲಿ ಡಯಲ್-100 ಯೋಜನೆಯನ್ನು ಪರಿಚಯಿಸಲಾಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಮೈಸೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಡಯಲ್ -100 ಸೇವೆಯನ್ನು ಆಧುನಿಕರಣಗೊಳಿಸಲಾಗಿದೆ. ಪೊಲೀಸ್ ಸ್ಪಂದನಾ ಸಮಯದಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧಗಳಿಗೆ ತ್ವರಿತವಾಗಿ ಸ್ಪಂದಿಸಲು ಡೌನಲೋಡ್ ಮಾಡಿಕೊಳ್ಳಬಹುದಾದ ಆ್ಯಪ್ಗಳನ್ನು ಪರಿಚಯಿಸಲಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಕೆಯ ಭಾಗವಾಗಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಎಫ್.ಎಸ್.ಎಲ್ ಉನ್ನತೀಕರಣಕ್ಕೆ ಹಾಗೂ 80 ಕೋಟಿ ರೂಪಾಯಿ ವೆಚ್ಚದಲ್ಲಿ ಕಮಾಂಡ್ ಕಂಟ್ರೋಲ್ ಸ್ಥಾಪನೆಗೆ ಆಡಳಿತಾತ್ಮಕ ಅನಮೋದನೆ ನೀಡಲಾಗಿದೆ. ಪ್ರಸ್ತುತ ಒಟ್ಟು 100 ಇನೋವಾ ಮಾದರಿಯ ಹೈವೆ ಪೆಟ್ರೋಲಿಂಗ್ ವಾಹನಗಳು ಆಧುನಿಕ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ 51 ಮಹಿಳಾ ಸಿಬ್ಬಂದಿ ಸಹಿತ ಪಿಂಕ್ ಹೊಯ್ಸಳ ವಾಹನಗಳ ಸೇರಿ ಒಟ್ಟು 273 ಆಧುನಿಕ ತಂತ್ರಜ್ಞಾನದ ಹೊಯ್ಸಳ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಸೈಬರ್ ಕ್ರೈಂ, ಡಿಜಿಟಲ್ ಸಾಕ್ಷಾಧಾರಗಳ ವೈಜ್ಞಾನಿಕ ಸಂಗ್ರಹಣೆ, ರಕ್ಷಣೆ ಹಾಗೂ ತನಿಖೆ ಬಗ್ಗೆ ತರಬೇತಿಗೆ 2016-17ನೇ ಸಾಲಿನಲ್ಲಿ 1.5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಅನುಪಾತವು 632ರಷ್ಟು ಇರುತ್ತದೆ. ರಾಷ್ಟ್ರೀಯ ಪೊಲೀಸ್ ಆಯೋಗದ ಏಳನೇ ವರದಿ ಅನುಸಾರ ಅಲ್ಪಮಟ್ಟಿನ ಪೊಲೀಸ್ ಸಿಬ್ಬಂದಿ ಕೊರತೆಯಿದೆ. ಅದನ್ನು ತಾತ್ಕಾಲಿಕವಾಗಿ ಲಭ್ಯವಿರುವ 25 ಸಾವಿರ ಗೃಹರಕ್ಷಕರ ನಿಯೋಜನೆ ಸೇವೆಪಡೆದು ಪೊಲೀಸ್ರ ಮೇಲಿರುವ ಹೊರೆ ಕಡಿಮೆ ಮಾಡಲಾಗುತ್ತಿದೆ. 2016-17ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಮೂರು ವರ್ಷಗಳ ಕಾಲಾವಧಿಯಲ್ಲಿ ಒಟ್ಟು 942 ಪಿಎಸ್ಐ ಮತ್ತು 12,139 ಪಿಸಿ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿದೆ. ಪೊಲೀಸ್ ಸಿಬ್ಬಂದಿಗಳ ಒತ್ತಡ ಕಡಿಮೆ ಮಾಡಲು ವಾರದ ರಜೆ ಕಡ್ಡಾಯವಾಗಿ ನೀಡಲಾಗುತ್ತಿದೆ. ಆರ್ಡರ್ಲಿ ಪದ್ಧತಿ ಕೈಬಿಟ್ಟು ಫಾಲೋವರ್ಸಗಳನ್ನು ನೇಮಕ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ. ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸುವಾಗ ಸಿಬ್ಬಂದಿಯ ಆರೋಗ್ಯ ಸ್ಥಿತಿ ಪರಿಗಣಿಸಲಾಗುತ್ತಿದೆ. ನೂತನ ತಂತ್ರಜ್ಞಾನಗಳ ಪರಿಚಯ, ವಾಹನಗಳ ಒದಗಿಸುವಿಕೆಯಿಂದ ಅಪರಾಧಗಳ ತಡೆ ಮತ್ತು ಸ್ಥಳಕ್ಕೆ ಭೇಟಿ ನೀಡುವ ಕಾರ್ಯ ಸುಗಮವಾಗಿದೆ. ಸಿಬ್ಬಂದಿ ಒತ್ತಡ ಕಡಿಮೆ ಮಾಡಲು ಆಟೋಟ, ಯೋಗ, ವ್ಯಾಯಾಮ, ಕೌನ್ಸಿಲಿಂಗ್, ತಜ್ಞ ವೈದ್ಯರಿಂದ ಆರೋಗ್ಯ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾನಸಿಕಸ್ಥೈರ್ಯ ಹೆಚ್ಚಿಸಲು ಮನೋವೈಜ್ಞಾನಿಕ ಸಲಹೆ ನೀಡಲು ಸಮಾಲೋಚಕರು ಹಾಗೂ ಹಿರಿಯ ಸಮಾಲೋಚಕರ ಹುದ್ದೆಗಳನ್ನು ಸೃಷ್ಠಿಸಿ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ನೂತನ ಸಬ್ ಬೀಟ್ ವ್ಯವಸ್ಥೆಯಿಂದ ಸ್ಥಳೀಯ ಜನರು ಮತ್ತು ಪೊಲೀಸ್ರ ಸಂಪರ್ಕ ಹೆಚ್ಚಾಗಿದೆ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಎಂದು ವಿವರಿಸಿದರು.
(Release ID 616)