ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
Department of Urban23-ನವೆಂಬರ್, 2017 17:30 IST

ಬೆಂಗಳೂರು ಮೆಟ್ರೊ; ಕನ್ನಡಿಗ ಸಿಬ್ಬಂದಿಯ ಹಿತರಕ್ಷಣೆಗೆ ಬದ್ಧ; ಸಚಿವ ಕೆ.ಜೆ.ಜಾರ್ಜ್
ಬೆಳಗಾವಿ, ನ.23 (ಕರ್ನಾಟಕ ವಾರ್ತೆ): ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿ.ಎಮ್.ಆರ್.ಸಿ.ಎಲ್) ದಲ್ಲಿ 33 ಮಂದಿ ಉದ್ಯೋಗಿಗಳು ನಿಯೋಜನೆ ಮೇಲೆ ಹಾಗೂ 761 ಉದ್ಯೋಗಿಗಳು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿದ್ದಾರೆ, ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ ಸಿಬ್ಬಂದಿ ಶಿಸ್ತು ವರ್ತನೆ ಉಲ್ಲಂಘಿಸಿದಾಗ ಎಲ್ಲರಿಗೂ ಒಂದೇ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವರಾದ ಕೆ.ಜೆ.ಜಾರ್ಜ ಅವರು ಹೇಳಿದರು. ವಿಧಾನ ಪರಿಷತ್ನಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ ಅವರ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿ ನೀಡಿದರು. ಬಿ.ಎಮ್.ಆರ್.ಸಿ.ಎಲ್ ನ ಯಾವುದೇ ಉದ್ಯೋಗಿಗೆ ವಿಧಿಸುವ ಶಿಕ್ಷೆಯು ಆ ಉದ್ಯೋಗಿಯ ವಿರುದ್ಧ ಮಾಡಿರುವ ಮತ್ತು ಸಾಬಿತಾಗಿರುವ ಆರೋಪಗಳಿಗೆ ತಕ್ಕದಾಗಿರುತ್ತದೆ. ರೆಡ್ ಸಿಗ್ನಲ್ ಕ್ರಾಸ್ ಘಟನೆಗೆ ಸಂಬಂಧಿಸಿದಂತೆ 9 ಸ್ಟೇಷನ್ ಕಂಟ್ರೋಲರ್ ಹಾಗೂ ಟ್ರೈನ್ ಆಪರೇಟರ್ಗಳ ಮೇಲೆ ಕ್ರಮ ಜರುಗಿಸಿ ಸೂಕ್ತ ದಂಡನೆ ವಿಧಿಸಲಾಗಿದೆ. ಪಾಯಿಂಟ್ ಯಂತ್ರ ಹಾಳು ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಜೂನಿಯರ್ ಇಂಜನೀಯರ ವೃಂದದ ಇಬ್ಬರು ಉದ್ಯೋಗಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ. ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ ಅವರು ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಲಾಗುವುದು. ಸಿಬ್ಬಂದಿ ಶಿಸ್ತು ಕ್ರಮ ವಿಚಾರದಲ್ಲಿ ಸಚಿವರು ಹಾಗೂ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು. ಡಿಸೆಂಬರ್ದಲ್ಲಿ ಹೆಚ್ಚು ಬೋಗಿಗಳ ಅಳವಡಿಕೆ: ಬೆಂಗಳೂರು ಮೆಟ್ರೋದ 50 ರೈಲುಗಳಿಗೆ ಡಿಸೆಂಬರ್ ತಿಂಗಳಲ್ಲಿ 150 ಹೊಸ ಬೋಗಿಗಳನ್ನು ಅಳವಡಿಸಲಾಗುವುದು. ಆ ಸಂದರ್ಭದಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಬೋಗಿ ಮೀಸಲಿಡಲಾಗುವುದು ಎಂದು ಸಚಿವರಾದ ಕೆ.ಜೆ.ಜಾರ್ಜ ಅವರು ಹೇಳಿದರು. ವಿಧಾನ ಪರಿಷತ್ನಲ್ಲಿ ಸದಸೆÀ್ಯ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿ ನೀಡಿದರು. ಪ್ರತಿನಿತ್ಯ ಸುಮಾರು 3ಲಕ್ಷ ಜನ ಮೆಟ್ರೋ ರೈಲಿನ ಮೂಲಕ ಸಂಚರಿಸುತ್ತಿದ್ದಾರೆ. ಇದೀಗ ಪ್ರತಿ 6ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತಿದ್ದು, ಇದರ ಅವಧಿಯನ್ನು 4 ಅಥವಾ 3 ನಿಮಿಷಕ್ಕೆ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
(Release ID 617)