ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
Department of Kannada & Culture 25-ನವೆಂಬರ್, 2017 17:31 IST

ಅಂಬೇಡ್ಕರ್ ಜ್ಞಾನ ಬಳಕೆಯಾಗದಿರುವುದೆ ಅಸಮಾನತೆಗೆ ಕಾರಣ: ಪ್ರೊ.ಕೆ.ಎಸ್.ಭಗವಾನ್
ಮೈಸೂರು.ನ.25(ಕರ್ನಾಟಕ ವಾರ್ತೆ):- ಸಂವಿಧಾನದ ಆಶಯ ಈಡೇರದೆ ಎಲ್ಲೆಲ್ಲೂ ಅಸಮಾನತೆ ತಾಂಡವಾಡುತ್ತಿದೆ. ಇದಕ್ಕೆ ಅಂಬೇಡ್ಕರ್ ಅವರು ಸಮಾಜಕ್ಕೆ ಧಾರೆಯೆರೆದ ಜ್ಞಾನ ಸಮರ್ಪಕವಾಗಿ ಬಳಕೆಯಾಗದಿರುವುದೆ ಪ್ರಮುಖ ಕಾರಣ ಎಂದು ಪ್ರೊ.ಕೆ.ಎಸ್ ಭಗವಾನ್ ಅವರು ಹೇಳಿದರು. ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆದ ಶನಿವಾರದಂದು ನಡೆದ “ಅಲಕ್ಷಿತ ಜನಸಮುದಾಯಗಳು” ಎಂಬ ವಿಷಯದ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂಬೇಡ್ಕರವರ ಜ್ಞಾನದ ಬದಲು ಅವರ ಜಾತಿಯನ್ನು ಗುರಿಯಾಗಿಸಿ ಚರ್ಚೆ ನಡೆಯುತ್ತಿದೆ. ಇದು ಮಾರಕವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮೀಸಲಾತಿಯ ಪರ-ವಿರೋಧ ಚರ್ಚೆ ಉಲ್ಲೇಖಿಸಿ ಮಾತನಾಡಿ ಇಂದಿನ ಮೀಸಲಾತಿ ಸಮರ್ಪಕವಾಗಿಲ್ಲ, ಇದು ಬದಲಾಗಬೇಕು. ಸಮುದಯಗಳ ಜನಸಂಖ್ಯೆಗೆ ಅನುಗುಣವಾದ ಮೀಸಲಾತಿ ಜಾರಿಯಾದರೆ ಅಲಕ್ಷಿತ ಜನಸಮುದಾಯವನ್ನು ಸಾಮಾಜಿಕವಾಗಿ ಮೇಲೆತ್ತಬಹುದು ಎಂದರು. ‘ವಿಶೇಷ ಚೇತನರು’ ಎಂಬ ವಿಷಯ ಕುರಿತು ಮಾತನಾಡಿದ ಜಿ.ಕೆ.ಮಹಾಂತೇಶ್ ಅವರು ವಿಶೇಷ ಚೇತನರಿಗೆ ಅನುಮಾನ,ಅನುಕಂಪನತ್ತು ಕೀಳರಿಮೆ ಬಿಟ್ಟು ಅವಕಾಶಗಳನ್ನು ಸೃಷಿ ಮಾಡುವುದು ಇಂದಿನ ಅನಿವಾರ್ಯ.ವಿಕಲ ಚೇತನ ಸ್ನೇಹಮಯಿ ಸಮಾಜ ನಿರ್ಮಾಣ ಆಗಬೇಕು. ಇದರ ಹೊಣೆಯನ್ನು ಎಲ್ಲರ ಹೊರಬೇಕು ಎಂದರು. ಗೋಷ್ಠಿಯಲ್ಲಿ ಡಾ.ಮೀನಾಕ್ಷಿ ಬಾಳಿ ಅವರು ‘ಲೈಂಗಿಕ ದಮನಿತರು’ ವಿಷಯದ ಕುರಿತು ಮಾತನಾಡಿ, ಲೈಂಗಿಕತೆ ಜಗತ್ತಿನ ಪ್ರಾಚೀನ ವೃತ್ತಿಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿ ಈ ವೃತ್ತಿಯಲ್ಲಿರುವವರು ಉತ್ತರ ಕರ್ನಾಟಕದವರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೇವದಾಸಿ ಪದ್ದತಿ ಈ ದಂದೆಗೆ ರಹದಾರಿ ನೀಡಿದಂತಾಗಿದೆ. ಒಮ್ಮೆ ಈ ವೃತ್ತಿಗಿಳಿದರೆ ಅವರಿಗೆ ಪರ್ಯಾಯ ಬದುಕೆ ಇಲ್ಲ ಎಂದರು. ಡಾ.ಬಾಲಗುರುಮೂರ್ತಿ ಅವರು ‘ಅಲೆಮಾರಿಗಳು’ ಎಂಬ ವಿಷಯ ಮಂಡಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಂದಿಗೂ ಜಾತಿ ಪತ್ರಕ್ಕಾಗಿ ಹಲವು ಅಲೆಮಾರಿ ಸಮುದಾಯ ಅಲೆಯುತ್ತಿದೆ. ಅಲೆಮಾರಿಗಳಿಗೆ ಧ್ವನಿ ಇಲ್ಲದಂತಾಗಿದೆ. ರಾಜ್ಯದ ಒಟ್ಟು ಅಲೆಮಾರಿಗಳ ಪೈಕಿ ಶೇ 89ರಷ್ಟು ಜನರಿಗೆ ಸ್ಮಶಾನವೇ ಇಲ್ಲ ಎಂದರು. ‘ಬುಡಕಟ್ಟು ಸಮುದಾಯ’ ವಿಷಯ ಕುರಿತು ಮಾತನಾಡಿದ ಡಾ.ಎಂ.ಕೆ.ಗುರುಲಿಂಗಯ್ಯ ಅವರು, ಅನಕ್ಷರತೆ ಈ ಸಮುದಾಯವನ್ನು ತೀವ್ರವಾಗಿ ಕಾಡುತ್ತಿದೆ. ಸರ್ಕಾರ ಒಪ್ಪಿಕೊಂಡಿರುವ ನೂತನ ಸಾಂಸ್ಕøತಿ ನೀತಿಯಲ್ಲಿ ಕರ್ನಾಟಕದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ರಚನೆ ಅಭಿನಂದನಾರ್ಹವಾಗಿದೆ ಎಂದರು. ಹರಿಹರ ಆನಂದಸ್ವಾಮಿ ಮತ್ತು ಸಿದ್ದಸ್ವಾಮಿ ಅವರು ಗೋಷ್ಠಿಯ ವಿಷಯಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
(Release ID 621)