ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
Department of Kannada & Culture 25-ನವೆಂಬರ್, 2017 17:32 IST

ಪತ್ರಿಕೆಯು ವೈಚಾರಿಕ ಬದ್ಧವಾಗಿರಬೇಕು: ಚಂದ್ರಶೇಖರ್ ಪಾಟೀಲ
ಮೈಸೂರು.ನ.25(ಕರ್ನಾಟಕ ವಾರ್ತೆ):- ವೈಚಾರಿಕತೆ ಬದ್ಧತೆ ನಿಗದಿತ ಸಮಯದಲ್ಲಿ ಪತ್ರಿಕೆ ಚಂದದಾರರಿಗೆ ತಲುಪಬೇಕು. ಪತ್ರಿಕೆಯು ಆರೋಗ್ಯ ಪೂರ್ಣವಾಗಿ, ಸಂವಿಧಾನ ಬದ್ಧವಾಗಿ ಅಕ್ಷರದಿಂದ ಸಮಾಜದ ಅಂಕು ಡೊಂಕು ಸರಿಪಡಿಸಬಹುದು ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ ಅವರು ಹೇಳಿದರು. ಚಂದ್ರಕಾಂತ ವಡ್ಡು ಸಂಪಾದಕತ್ವದ ಸಮಾಜಮುಖಿ ಮಾಸಪತ್ರಿಕೆ ಪ್ರಾಯೋಗಿ ಸಂಚಿಕೆಯನ್ನು ಸಾಹಿತ್ಯ ಸಮ್ಮೇಳನದ ಮಾಧ್ಯಮ ಕೇಂದ್ರದಲ್ಲಿ ಚಂದ್ರಶೇಖರ್ ಪಾಟೀಲ ಅವರು ಬಿಡುಗಡೆ ಮಾಡಿದರು. ಸಂಪಾದಕೀಯ ಸಲಹೆಗಾರರಾದ ಪೃಥ್ವಿದತ್ತ ಚಂದ್ರಶೋಭಿ, ಸಂಪಾದಕರಾದ ಚಂದ್ರಕಾಂತ ವಡ್ಡು ಮತ್ತು ಕಾರ್ಯಕಾರಿ ಸಂಪಾದಕರಾದ ಚಂದ್ರಶೇಖರ ಬೆಳೆಗೆರೆ ಉಪಸ್ಥಿತರಿದ್ದರು. ಸಾಹಿತ್ಯಾಸಕ್ತರಿಗೆ ಉಚಿತ ಪ್ರವಾಸ ಮೈಸೂರು.ನ.25(ಕರ್ನಾಟಕ ವಾರ್ತೆ):- ಪ್ರವಾಸೋದ್ಯಮ ಇಲಾಖೆಯಿಂದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿರುವ ಸಾಹಿತ್ಯಾಸಕ್ತರಿಗೆ ಕವಿರಾಜಮಾರ್ಗ ಉಚಿತ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪ್ರವಾಸೋದ್ಯಮ ಉಪನಿರ್ದೇಶಕರಾದ ಜನಾರ್ಧನ್ ಅವರು ಚಾಲನೆ ನೀಡಿದರು. ಈ ಪ್ರವಾಸದಲ್ಲಿ ಮೈಸೂರಿನಲ್ಲಿರುವ ಕುವೆಂಪು ಮನೆ, ಆರ್.ಕೆ ನಾರಾಯಣ್ ಅವರ ಸಂಗ್ರಹಾಲಯ , ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಹಾಗೂ ರಂಗಾಯಣಕ್ಕೆ ಭೇಟಿ ನೀಡಿ ಅಲ್ಲಿಯ ವಿಶೇಷತೆಗಳನ್ನು ವೀಕ್ಷಿಸಲಾಗುವುದು.ಇಂದು ನಡೆದ ಪ್ರವಾಸ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸಿದರು. ನವೆಂರ್ 26ರಂದು ಸಹ ಬೆಳಿಗ್ಗೆ 10 ಗಂಟೆಗೆ ಈ ಪ್ರವಾಸ ನಡೆಯಲಿದೆ.
(Release ID 622)