ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
Department of Kannada & Culture 25-ನವೆಂಬರ್, 2017 17:33 IST

ಶಾಲೆಗಳಲ್ಲಿ ಮಕ್ಕಳು ಕನ್ನಡ ಭಾಷೆಯನ್ನು ಹೆಚ್ಚು ಬಳಸುವಂತಾಗಬೇಕು: ಮಹಮ್ಮದ್ ಕುಂಞ
ಮೈಸೂರು. ನ.25(ಕರ್ನಾಟಕ ವಾರ್ತೆ):- 83ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಂದು ಕಲಾಮಂದಿರದಲ್ಲಿ ನಡೆದ ‘ಮಕ್ಕಳ ಸಾಹಿತ್ಯ ಗೋಷ್ಠಿ’ಯಲ್ಲಿ ‘ಶಾಲೆಗಳಲ್ಲಿ ಮಕ್ಕಳು ಇಂಗ್ಲಿಷ್ ಅಥವಾ ಹಿಂದಿ ಭಾಷೆಯನ್ನು ಬಳಸುತ್ತಿದ್ದಾರೆ. ಕನ್ನಡ ಭಾಷೆ ಬಳಸುವುದು ಕಡಿಮೆಯಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳು ಕನ್ನಡ ಭಾಷೆಯನ್ನು ಹೆಚ್ಚು ಬಳಸುವಂತಾಗಳಬೇಕು’ ಎಂದು ಹಿರಿಯ ಮಕ್ಕಳ ಸಾಹಿತಿ ಬೋಳುವಾರು ಮಹಮ್ಮದ್ ಕುಂಞ ಕಿವಿ ಮಾತು ಹೇಳಿದರು. ಮಕ್ಕಳ ಪಠ್ಯಕ್ರಮ, ಅವರ ಮನಸ್ಸಿಗೆ ತಲುಪುವಂತಿರಬೇಕು. ಆಗ ಮಾತ್ರ ಅದು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಕಾಲ ಉಳಿಯುತ್ತದೆ. ಮಕ್ಕಳ ಪದ್ಯಗಳನ್ನು ಮಕ್ಕಳೇ ತಯಾರಿಸಲಿ, ಸಣ್ಣ ಮಕ್ಕಳ ಕ್ಷೇತ್ರದಲ್ಲಿ ದೊಡ್ಡವರು ಬಳಸಿಕೊಳ್ಳುವುದು ಬಹುದೊಡ್ಡ ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯರು ಮಕ್ಕಳಿಗೆ ಪಠ್ಯಕ್ರಮ ರಚಿಸುವಾಗ ಮಕ್ಕಳ ಮನಸ್ಥಿತಿಯನ್ನು ಅರಿತುಕೊಂಡು ಮಕ್ಕಳಾಗಿ ರಚಿಸಬೇಕು. ಹಿರಿಯರ ರೀತಿ ಪಠ್ಯಕ್ರಮ ರಚಿಸಿ ಸಣ್ಣ ಮಕ್ಕಳು ದೊಡ್ಡವರಾಗುವಂತೆ ಮಾಡಬೇಡಿ ಎಂದು ಹೇಳಿದರು. ಪ್ರತಿಯೊಬ್ಬರಲ್ಲಿ ದೇಶಭಕ್ತಿ ಇರಬೇಕು. ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ದೇಶ ಭಾರತದೇಶವಾಗಬೇಕು. ಈ ನಿಟ್ಟಿಯಲ್ಲಿ ಪ್ರತಿಯೊಬ್ಬರು ಟೊಂಕ ಕಟ್ಟಿ ನಿಲ್ಲಾಬೇಕು. ದೇಶಭಕ್ತಿಯನ್ನು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಬೆಳೆಸಬೇಕು ಎಂದರು. ಶಾಲೆಯಲ್ಲಿ ನಾವು ಹಲವು ಭಾಷೆಗಳನ್ನು ಕಲಿಯಬಹುದು ಕರ್ನಾಟಕದಲ್ಲಿ ವಾಸವಾಗಿರುವ ನಾವು ಸದಾ ಕನ್ನಡದಲ್ಲೇ ಮಾತನಾಡಬೇಕು ಎಂದು ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ಪ್ರಶಸ್ತಿ ಪುರಸ್ಕøತ ಹಾಗೂ ಕಿರಿಯ ಸಾಹಿತಿಯಾದ ಕುಮಾರಿ ಸಾನಿಯಾ ಧನ್ನೂರ ಅವರು ತಿಳಿಸಿದರು. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ, ಕನಸುಗಳು ಗುರಿಯನ್ನು ತೋರಿಸುತ್ತದೆ. ಶಾಲೆಗಳಲ್ಲಿರುವ ಮಕ್ಕಳ ದಿನಚರಿಯಲ್ಲಿ ಮಕ್ಕಳ ಆಟದ ಅವಧಿಯನ್ನು ಹೆಚ್ಚಳಗೊಳಿಸಬೇಕು. ಇದರಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕವಾಗಿ ಹೆಚ್ಚು ಸಶಕ್ತರಾಗುತ್ತಾರೆ. ಮಕ್ಕಳು ಪರಿಸರದ ನಡುವೆ ಬೆಳೆಸಬೇಕು. ನಾಲ್ಕು ಗೋಡೆಯ ಕಟ್ಟಡದ ಮಧ್ಯವಲ್ಲ. ಮಕ್ಕಳು ಪ್ರಕೃತಿಯ ನಡುವೆ ಬೆಳೆದರೆ ಬಹಳಷ್ಟು ಜೀವನದ ಕಷ್ಟ ಸುಖಗಳನ್ನು ತಿಳಿಯಬಹುದು ಎಂದು ಪಬ್ಲಿಕ್ ಹೀರೋ ಪ್ರಶಸ್ತಿ ಹಾಗೂ ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಕುಮಾರ ಅಂತಃಕರಣ ನನ್ನ ನಾಳೆ ನನ್ನ ಕನಸು ಎಂಬ ವಿಚಾರ ಮಂಡಿಸುತ್ತ ತಿಳಿಸಿದರು. ಮಕ್ಕಳ ಸಾಹಿತ್ಯ- ಇತ್ತೀಚಿನ ಒಲವುಗಳ ವಿಷಯವನ್ನು ಮಂಡಿಸುತ್ತ ಫ.ಗು ಸಿದ್ದಾಪೂರ ಅವರು ಮಾತನಾಡಿ ಇಂದಿನ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಸೃಜನಶೀಲ ಸಾಹಿತ್ಯದ ಜ್ಞಾನ ಹೆಚ್ಚಿಸಬೇಕು. ಮಕ್ಕಳು ಇಂದಿನ ದಿನದಲ್ಲಿ ಬಹಳ ಮುಂದುವರೆದಿದ್ದಾರೆ. ಮಕ್ಕಳಿಗೆ ಚಂದ್ರನನ್ನು ತೋರಿಸಿ ಕೈತುತ್ತು ನೀಡುವ ದಿನ ಕಾಣೆಯಾಗುತ್ತಿದೆ ಮುಂದೆ ಮಂಗಳನತ್ತ ತೋರಿಸುತ್ತ ಕೈತುತ್ತು ನೀಡುವ ಕಾಲ ದೂರವಿಲ್ಲ ಎಂದರು.
(Release ID 623)