ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
Department of Kannada & Culture 25-ನವೆಂಬರ್, 2017 17:33 IST

ಉನ್ನತ ಶಿಕ್ಷಣಕ್ಕೆ ಹೆಚ್ಚಿನ ನೀಡುವುದು ಮುಖ್ಯ : ಸಚಿವ ಬಸವರಾಜ ರಾಯರೆಡ್ಡಿ
ಧಾರವಾಡ (ಕರ್ನಾಟಕ ವಾರ್ತೆ ) ನ.25: ರಾಜ್ಯದಲ್ಲಿ ಮುಂದಿನ ವರ್ಷದಲ್ಲಿ ಹೆಚ್ಚು ಪದವೀಧರರಾಗಬೇಕು. ಈಗ ರಾಜ್ಯದಲ್ಲಿ ಶೇ.28 ರಷ್ಟು ಪದವೀಧರರಿದ್ದಾರೆ. ಪದವೀಧರರ ಸಂಖ್ಯೆ ಶೇ. 40ಕ್ಕೆಏರಿಕೆ ಆಗಬೇಕು. ಆ ನಿಟ್ಟಿನಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಹೇಳಿದರು. ಕುಮಾರೇಶ್ವರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನೇರೆವೇರಿಸಿ ಅವರು ಮಾತನಾಡಿದರು. ಈ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಸುಮಾರು 4.68 ಕೋಟಿ ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ 1.5 ಕೋಟಿ ಬಿಡುಗಡೆ ಮಾಡಲಾಗುವುದು. ರಾಜ್ಯದಲ್ಲಿ ಸುಮಾರು 412 ಸರಕಾರಿ ಕಾಲೇಜುಗಳಿದ್ದು, 9,000 ಅಧ್ಯಾಪಕರಿದ್ದಾರೆ. ಅದರಲ್ಲಿ 8,100 ಸಹಾಯಕ ಪ್ರಾಧ್ಯಾಪಕರಿದ್ದಾರೆ. 900 ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಿದ್ದು, ಶೀಘ್ರದಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು. ರಾಜ್ಯದ ಪ್ರತಿ ಕಾಲೇಜಿನ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದರು. ರಾಜ್ಯದಲ್ಲಿ ಎಸ್.ಸಿ ಹಾಗೂ ಎಸ್.ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪಟಾಪ್ ವಿತರಿಸಲಾಗುವುದು. ಮುಂದಿನ ವರ್ಷದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಸಹ ಉಚಿತವಾಗಿ ಲ್ಯಾಪಟಾಪ್ ವಿತರಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ರಾಜಶೇಖರ್ ನಾಯ್ಕಲ್, ಡಾ.ಎಸ್.ಬಿ.ಖಣದಾಳಿ, ಜಿ.ಎನ್.ವಿ.ಪಾಟೀಲ್, ಪ್ರಾಚಾರ್ಯ ಪ್ರೊ.ಸಿ.ಪಿ.ಬಹ್ಮನಪಾಡ, ಸೇರಿದಂತೆ ಇತರರು ಇದ್ದರು.
(Release ID 624)