ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
General25-ನವೆಂಬರ್, 2017 17:34 IST

ಸರ್ವರಿಗೂ ಅರೋಗ್ಯ ಸೇವೆ: ಸಿದ್ದರಾಮಯ್ಯ
ಮೈಸೂರು.ನ.25(ಕರ್ನಾಟಕ ವಾರ್ತೆ):- ರಾಜ್ಯದ ಪ್ರತಿಯೊಭ್ಬರಿಗೂ ಸರ್ಕಾರದಿಂದ ಉಚಿತ ಅರೋಗ್ಯ ಸೇವೆ ದೊರಕಬೇಕು ಎಂಬ ಉದ್ದೇಶದಿಂದ ಸಾರ್ವತ್ರಿಕ ಅರೋಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಶುಕ್ರವಾರ ಕಣಿಯನಹುಂಡಿಯಲ್ಲಿ ನೂತನವಾಗಿ ಜೀರ್ಣೋದ್ದಾರಗೊಂಡಿರುವ ಶ್ರೀ ಕಾರ್ಗಳ್ಳಿ ಬಸವೇಶ್ವರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಅರೋಗ್ಯ ಸೇವೆ ನೀಡಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಬಿ.ಪಿ.ಎಲ್ ಕಾರ್ಡುದಾರರಿಗೆ ಯಾವುದೇ ಹಣ ಪಾವತಿಸುವ ಅವಶ್ಯಕತೆ ಇಲ್ಲ.ಇನ್ನುಳಿದವರು ಗ್ರಾಮೀಣ ಭಾಗದವರು ರೂ 300/- ಹಾಗೂ ನಗರ ಪ್ರದೇಶದವರು ಪ್ರತಿ ವರ್ಷ ರೂ 700/- ಪಾವತಿಸಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರಗಳಲ್ಲೂ ಉಚಿತ ಸೇವೆ ಪಡೆಯಬಹುದಾಗಿದೆ ಎಂದರು. ಸರ್ಕಾರ ಬಡತನವನ್ನು ನೀಗಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ 7 ಕೆ.ಜಿಅಕ್ಕಿ, ಪ್ರತಿ ಲೀಟರ್ ಹಾಲಿಗೆ 5 ರೂ ಸಬ್ಸಿಡಿ, ವಾರದಲ್ಲಿ5 ದಿನ ಶಾಲಾ ಮಕ್ಕಳಿಗೆ ಹಾಲು, ಮೈತ್ರಿ , ಮನಸ್ವಿನಿ, ಕೃಷಿ ಭಾಗ್ಯ, ಪಶು ಭಾಗ್ಯ ಸೇದಿದಂತೆ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು. ರೈತರ ಕಷ್ಟಗಳನ್ನು ನೀಗಿಸುವ ಉದ್ದೇಶದಿಂದ ರೈತರ 50,000/- ರೂ ಸಾಲವನ್ನು ಸರ್ಕಾರದಿಂದ ಮನ್ನಾ ಮಾಡಲಾಗಿದೆ ಇದಕ್ಕಾಗಿ ರೂ 8155 ಕೋಟಿ ರೂ ವೆಚ್ಚ ಮಾಡಲಾಗಿದೆ. ಪ್ರತಿ ಹೋಬಳಿಯಲ್ಲೂ ಮೊರಾರ್ಜಿ ದೇಸಾಯಿ ಶಾಲೆಯನ್ನು ಪ್ರಾರಂಭಿಸಲಾಗುತ್ತಿದ್ದು, ಹಂಪಾಪುರ ಹೋಬಳಿಯಲ್ಲೂ ಸಹ ಮೊರಾರ್ಜಿ ದೇಸಾಯಿ ಶಾಲೆ ಪ್ರಾರಂಭಿಸಲಾಗುವುದು ಎಂದರು. ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಕಾವೇರಿ ನೀರಾವರಿ ನಿಗಮದ ವತಿಯಿಂದ ಹಂಪಾಪುರ ಹೋಬಳಿ ಸೇರಿದಂತೆ ಮೈಸೂರಿನಲ್ಲಿ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದು ಟೆಂಡರ್ ಕರೆದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು. ನಂಬಿಕೆ, ಮೂಡನಂಬಿಕೆ, ಅಪನಂಬಿಕೆ ಎಂದು ಮೂರು ವಿಧಗಳಿವೆ. ದೇವರಲ್ಲಿ ನಂಬಿಕೆ ಇರಬೇಕು, ದೇವರು ಎಲ್ಲೆಲ್ಲೂ ನೆಲೆಸಿರುತ್ತಾನೆ ಪ್ರತಿಯೊಬ್ಬರನ್ನು ಪ್ರೀತಿಸುವ ಪ್ರವೃತ್ತಿ ಬೆಳಸಿಕೊಳ್ಳಿ. ಮೂಡನಂಬಿಕೆ ಒಳ್ಳೆಯದಲ್ಲ , ಅಪನಂಬಿಕೆ ಅದಕ್ಕಿಂತ ಕೆಟ್ಟದ್ದು, ಇವೆರಡನ್ನು ದೂರವಿಡಿ ಎಂದರು. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ದ್ರುವನಾರಾಯಣ್, ಶಾಸಕ ವಾಸು, ಮಾಜಿ ಶಾಸಕ ಸತ್ಯನಾರಾಯಣ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೀತಾರಾಂ, ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
(Release ID 625)