ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
General23-ಡಿಸೆಂಬರ್, 2017 17:15 IST

ಸಾವಯವ ಪದ್ಧತಿಯಲ್ಲಿ ಮಿಶ್ರಬೆಳೆ ಬೆಳೆದ ಯಶಸ್ವಿರೈತ
ವಿಶೇಷ ಲೇಖನ: ಮಮತಾ ಸಿ.ಭದ್ರಾವತಿ ಶ್ರಮದ ಕೆಲಸ, ಅಕಾಲಿಕ ಮಳೆ. ಹವಮಾನ ವೈಪರಿತ್ಯ, ಬೆಲೆಕುಸಿತ ಹೀಗೆ ಹತ್ತಾರು ಕಾರಣ ನೀಡಿ ಕೃಷಿಯಿಂದ ವಿಮುಖರಾಗುತ್ತಿರುವವರ ನಡುವೆಯು ಕೃಷಿಯಲ್ಲಿ ನೂತನ ತಂತ್ರಜ್ಞಾನ, ಸಾವಯವ ಬೇಸಾಯ ಪದ್ಧತಿಗಳ ಅಳವಡಿಕೆ ಮಾಡಿಕೊಂಡು ಸದಾ ಲವಲವಿಕೆಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ವಿಟ್ಟಪ್ಪ ಅವರ ಜೀವನೋತ್ಸಹ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಪರಿಶ್ರಮ, ತಾಳ್ಮೆ, ಛಲವಿದ್ದರೆ ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬ ಮಾತಿಗೆ ನಿಜವಾದ ಅರ್ಥನೀಡಿದ್ದಾರೆ ರೈತ ವಿಟ್ಟಪ್ಪ. ಭೂಮಿ ತಾಯಿ ರೈತರ ಜೀವನಾಡಿ, ಜೊತೆಗೆ ಆಕೆಯನ್ನು ಪ್ರೀತಿಯಿಂದ ಸಾಕಿ ಸಲುಹಿದರೆ ಆಕೆ ರೈತರ ಪಾಲಿಗೆ ಅನ್ನದಾತೆ ಎಂಬ ಆಶಯದೊಂದಿಗೆ ಸುಮಾರು 15 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡು ಇಂದಿಗೂ ಯಶಸ್ವಿ ಕೃಷಿಕರಾಗಿದ್ದಾರೆ. ಆಧುನಿಕತೆಯ ಈ ಭರಾಟೆಯಲ್ಲಿ ನಿವೃತ್ತಿ ಪಡೆದು ಆರಾಮಾಗಿ ಜೀವನದ ದಿನಗಳನ್ನು ಕಳೆಯಬೇಕು ಎನ್ನುವವರಿಗೆ ಅಪವಾದ ಎಂಬಂತೆ ರೈತ ವಿಟ್ಟಪ್ಪ ಸ್ವತಃ ಇಂದಿಗೂ ತಾವೇ ಜಮೀನಿನಲ್ಲಿ ಕೆಲಸ ಮಾಡುತ್ತಾ ಉತ್ಸಾಹದಿಂದಲೇ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಇವರು ನಿವೃತ್ತಿಯಾದ ನಂತರ ತಮ್ಮ ಸಂಪೂರ್ಣ ದೃಷ್ಟಿ ನೆಟ್ಟಿದ್ದು ತಮ್ಮ ಫಲವತ್ತತಾದ ಕೃಷಿ ಭೂಮಿಯತ್ತ. ಸುಮಾರು 34 ಎಕರೆ ಫಲವತ್ತತಾದ ಭೂಮಿಯಲ್ಲಿ ಇವರು ಮಿಶ್ರ ಬೆಳೆಗಳನ್ನು ಬೆಳೆದು ಆರ್ಥಿಕ ಲಾಭ ಗಳಿಸುತ್ತಿದ್ದಾರೆ. ಪ್ರತಿನಿತ್ಯ 2 ರಿಂದ 3 ಜನ ಕೃಷಿ ಕಾರ್ಮಿಕರು ಇವರ ಕೃಷಿ ಭೂಮಿಯಲ್ಲಿ ದುಡಿಯುತ್ತಾರೆ. ಅವರೊಂದಿಗೆ ತಾವು ಪಾಲ್ಗೊಂಡು ಸದಾ ಲವಲವಿಕೆಯಿಂದ ಕೃಷಿ ಭೂಮಿಯಲ್ಲಿ ನೂತನ ಪ್ರಯೋಗ ಮಾಡುವ ಇವರು ಬೆಳೆಗಳ ಆರೋಗ್ಯ ಕಾಪಾಡುವತ್ತ ಗಮನಹರಿಸುತ್ತಾರೆ. ಯಾವುದೇ ರೈತನಾದರೂ ಸಹ ಎಂದೂ ಒಂದೇ ಬೆಳೆ ಅವಂಬಿಸದೆ ಮಿಶ್ರ ಬೆಳೆಗಳನ್ನು ಪಡೆದುಕೊಂಡಾಗ ಅವನು ಆರ್ಥಿಕವಾಗಿ ಸಬಲನಾಗಲು ಸಾಧ್ಯವೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಇವರು. ಮೂಲತಃ ದಾವಣಗೆರೆ ಜಿಲ್ಲೆ ನ್ಯಾಮತಿ ಸಮೀಪವಿರುವ ಬೀದರಹಳ್ಳಿರ ವಿಠ್ಠಪ್ಪ ಇವರು ತಮ್ಮ 30 ಎಕರೆ ಭೂಮಿಯಲ್ಲಿ ಭತ್ತ, ಬಿಳಿರಾಗಿ, ಹುರುಳಿ, ಅಡಿಕೆ 2800 ಗಿಡ, 500 ಗೋಡಂಬಿ ಗಿಡ, , ಪೇರಲೆ 20ಗಿಡ, ಸೀತಾಫಲ 20 ಗಿಡ, ಶ್ರೀಗಂಧ 1200 ಮರ, ತೇಗ 600 ಮರ, ತೆಂಗು 250 ಮರಗಳು, ಸಿಲ್ವರ್ 250 ಮರಗಳು, ಪಪ್ಪಾಯ 3 ಎಕರೆ, ಮೆಣಸು 700 ಬಳ್ಳಿಗಳು ಹೀಗೆ ಮಿಶ್ರ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ವೈಜ್ಞಾನಿಕವಾಗಿ ಬೆಳೆಗಳ ನಡುವೆ ಅಂತರ ಕಾಯ್ದುಕೊಂಡಾಗ ಮಾತ್ರ ಉತ್ತಮ ಫಸಲು ಬೆಳೆಯಲು ಸಾಧ್ಯವಾಗುತ್ತದೆ ಎಂದು ಇವರ ಕೃಷಿಭೂಮಿಯನ್ನು ನೋಡಿದಾಗ ತಿಳಿಯುತ್ತದೆ. ಗೋಡಂಬಿ ಬೆಳೆ ಒಂದರಿಂದಲೇ ವಾರ್ಷಿಕವಾಗಿ 7 ಲಕ್ಷ ಲಾಭಗಳಿಸುತ್ತಾರೆ. ಜಿಲ್ಲೆಯಲ್ಲಿ ಬಿಳಿರಾಗಿ ಬೆಳೆಯುವವರ ಸಂಖ್ಯೆ ಕಡಿಮೆಯಿರುವವರ ನಡುವೆ ವೈಜ್ಞಾನಿಕ ಮಾದರಿಗಳ ಮೂಲಕ ಬಿಳಿ ರಾಗಿ ಬೆಳೆಯುವ ಕ್ರಮಗಳನ್ನು ಕರಗತ ಮಾಡಿಕೊಂಡಿರುವ ಇವರು ಆ ಮೂಲಕ ಆದಾಯವನ್ನು ಇನ್ನೂ ಹೆಚ್ಚಿಸಿಕೊಳ್ಳುವ ನೀರಿಕ್ಷೆಯಲ್ಲಿದ್ದಾರೆ. ಸಂಪೂರ್ಣ ಫಲವತ್ತತಾದ ಭೂಮಿಯನ್ನು ಕಾಪಾಡಿಕೊಂಡು ಬಂದಿರುವ ಇವರು ತಮ್ಮ ಬೆಳೆಗಳಿಗೆ ಸಾವಯವ ಗೊಬ್ಬರ, ಕೀಟನಾಶಕ ಬಳಸಿ ಇಂದಿಗೂ ಭೂಮಿಯ ಫಲವತ್ತತೆ ಕಾಯ್ದುಕೊಳ್ಳುತ್ತಿರುವುದರ ಜೊತೆಗೆ ಬೆಳೆಗಳ ಇಳುವರಿಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಕುಟುಂಬದವರ ಪ್ರೋತ್ಸಾಹದೊಂದಿದೆ ಕೃಷಿ ಕಾರ್ಯಗಳಲ್ಲಿ ಪ್ರತಿನಿತ್ಯ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇರುವ ನೀರಿನ ಸೌಕರ್ಯವನ್ನಾಧರಿಸಿ ಮಿಶ್ರಬೆಳೆ ಬೆಳೆದು ಇಳುವರಿ ಪಡೆಯುತ್ತಿದ್ದು ಯಾವ ಬೆಳೆಗಳಿಗೆ ಎಷ್ಟು ಪ್ರಮಾಣದ ನೀರಿನ ಅವಶ್ಯಕತೆಯಿದೆ ಎಂದು ತಿಳಿದು ಅವುಗಳಿಗೆ ನೀರು ಮತ್ತು ಅಗತ್ಯವಿರುವಲ್ಲಿ ರಸಗೊಬ್ಬರವನ್ನು ಪೂರೈಸುತ್ತಾರೆ. ಇವರ ಕೃಷಿ ಭೂಮಿಯಲ್ಲಿ 4 ಬೋರ್ವೆಲ್ ಹಾಗೂ 4 ಕೃಷಿಹೊಂಡಗಳಿದ್ದು ಹನಿ ನೀರಾವರಿಯ ಮೂಲಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತಮ್ಮ ಭೂಮಿಯ ಫಲವತ್ತತೆಯಿಂದಾಗಿ ಮಳೆಯ ಅಭಾವವಿದ್ದಾಗಲೂ ಬೆಳೆಗಳು ಸಮೃದ್ದವಾಗಿ ಬೆಳೆಯುತ್ತವೆ. ಪಪ್ಪಾಯ ಬೆಳೆ ಹೊರತುಪಡಿಸಿ ಬೇರೆ ಯಾವುದೇ ಬೆಳೆಗೆ ರಾಸಾಯನಿಕ ಗೊಬ್ಬರ ಕೀಟನಾಶಕಗಳ ಬಳಕೆಯಿಲ್ಲದೆ ಇಂದಿಗೂ ಹಣ್ಣಿನ ಮರಗಳು ಸಮೃದ್ದವಾಗಿ ಕಂಗೊಳಿಸುತ್ತಿರುವುದಕ್ಕೆ ಕಾರಣವಾಗಿದೆ. ಅವರು ಹಿಂದಿನಿಂದಲೂ ರೂಢಿಸಿಕೊಂಡು ಬಂದ ಸಾವಯವ ಪದ್ಧತಿ. ಕೊಟ್ಟಿಗೆಗೊಬ್ಬರ, ತಮ್ಮ ತೋಟದಲ್ಲಿ ಸಿಗುವ ಹಸಿರೆಲೆ ಗೊಬ್ಬರ ಇವರ ಕೃಷಿ ಭೂಮಿಯನ್ನು ನಳನಳಿಸುವಂತೆ ಮಾಡಿದೆ. ಇವರು ಬೆಳೆದ ಹಣ್ಣುಗಳು ನೇರವಾಗಿ ತೋಟದಿಂದ ಮಾರುಕಟ್ಟೆಗೆ ರವಾನೆಯಾಗುತ್ತವೆ. ಹೆಚ್ಚು ಪೌಷ್ಟಿಕಾಂಶ, ಪರಿಮಳ ಭರಿತವಾದ ತೋಟದ ಹಣ್ಣುಗಳು ಹೆಚ್ಚು ರುಚಿಕರವಾಗಿದ್ದು ಸ್ವತಃ ತಾವೇ ಹಾಪ್ಕಾಮ್ಸ್ ಮೂಲಕ ಹಣ್ಣುಗಳನ್ನು ಯಾವುದೇ ದಲ್ಲಾಳಿ, ಮಾರಾಟಗಾರರ ಮದ್ಯಸ್ಥಿಕೆಯಿಲ್ಲದೇ ಮಾರಾಟ ಮಾಡುವುದರಿಂದ ಇವರು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ವೈಜ್ಞಾನಿಕ ವಿಧಾನದಲ್ಲಿ ಹಣ್ಣುಗಳನ್ನು ಪಕ್ವ ಮಾಡಿ ಮಾರಾಟ ಮಾಡುವ ಇವರ ಹಣ್ಣುಗಳ ಬೆಲೆ ತುಸು ಹೆಚ್ಚಿದ್ದರೂ ಕೊಳ್ಳುವವರ ಸಂಖ್ಯೆಗೆ ಕೊರತೆಯಿಲ್ಲ. ಕ್ರಮಬದ್ದವಾಗಿ ಇವರು ನಿರ್ವಹಣೆ ಮಾಡಿ ಬೆಳೆದ ಬೆಳೆಗಳು ಕೃಷಿಭೂಮಿಯ ಅಂದವನ್ನು ಹೆಚ್ಚಿಸಿದೆ. ಭೂಮಿಯ ಫಲವತ್ತತೆ ಆಧರಿಸಿ ಸಮಗ್ರ ಕೃಷಿ ಕೈಗೊಳ್ಳುವ ಇವರು ನೀರಿನ ಬಳಕೆ ಕುರಿತು ಸದಾ ಜಾಗೃತರಾಗಿರುತ್ತಾರೆ. ವಾರ್ಷಿಕವಾಗಿ ಇವರು ತಮ್ಮ ಕೃಷಿ ಭೂಮಿಯಲ್ಲಿ 25 ರಿಂದ 30ಲಕ್ಷ ವಾರ್ಷಿಕ ಆದಾಯಗಳಿಸುತ್ತಾರೆ. ಕೃಷಿ ಇಲಾಖೆ ಏರ್ಪಡಿಸುವ ಕೃಷಿ ಮೇಳ, ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಯುವ ರೈತರಿಗೆ ಸಲಹೆ ಸೂಚನೆ, ಮಾರ್ಗದರ್ಶನ ನೀಡುವುದರೊಂದಿಗೆ ಕೃಷಿಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಸಿ ಹಲವಾರು ರೈತರಿಗೆ ಮಾದರಿಯಾಗಿ ನಿಂತಿದ್ದಾರೆ. ಕೋಟ್ ಬೆಲೆಕುಸಿತ, ಅಕಾಲಿಕ ಮಳೆ ಇವೆಲ್ಲದರಿಂದ ಬೆಸತ್ತ ರೈತರು ಮಿಶ್ರ ಬೆಳೆ ಬೆಳೆಯಲು ಮುಂದಾಗುವುದಿಲ್ಲ. ಒಂದು ಬೆಳೆಯಿಂದ ನಷ್ಟಕೊಳಗಾದರೆ ಇನ್ನೊಂದು ಬೆಳೆ ಅನಷ್ಟ ಭರಿಸಿ ಲಾಭ ತಂದುಕೊಡುತ್ತದೆ. ಉತ್ಸಾಹ, ಪರಿಶ್ರಮದಿಂದ ನಾವು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಆದಾಯ ಕಾಲಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ. ಸಾಂಪ್ರದಾಯಿಕ ಕೃಷಿ ವಿಧಾನಗÀಳ ಜೊತೆ ಜೊತೆಗೆ ನೂತನ ತಂತ್ರಜ್ಞಾನಗಳನ್ನು ಸಹ ಕೃಷಿಕ್ಷೇತ್ರದಲ್ಲಿ ರೈತರು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.
(Release ID 641)