ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
General04-ಜನವರಿ, 2018 17:45 IST

ಜಿಲ್ಲೆಗೆ ಡಿಜಿಟಲ್ ಗ್ರಂಥಾಲಯ- ಪ್ರಮೋದ್
ಉಡುಪಿ, ಜನವರಿ 4 (ಕರ್ನಾಟಕ ವಾರ್ತೆ):- ರಾಜ್ಯಕ್ಕೆ ಮಾದರಿ ಎನಿಸುವಂತಹ ಡಿಜಿಟಲ್ ಗ್ರಂಥಾಲಯವನ್ನು ಸುಮಾರು 5 ಕೋಟಿ.ರೂ ಅನುದಾನದಡಿ ಅಜ್ಜರಕಾಡಿನಲ್ಲಿ ನಿರ್ಮಿಸಲಾಗುತ್ತಿದೆ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರಿಂದು ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಿಲ್ಲಾ ಕೇಂದ್ರ ಗ್ರಂಥಾಲಯ , ಉಡುಪಿ ಮತ್ತು ರಾಜಾರಾಮ್ ಮೋಹನ್ ರಾಯ್ ಲೈಬ್ರರಿ ಫೌಂಡೇಶನ್, ಕೊಲ್ಕತ್ತಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಂಥಾಲಯ ಮೇಲ್ವೀಚಾರಕರಿಗೆ ಮೂರು ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. ಜಗತ್ತು ತಾಂತ್ರಿಕತೆಯಲ್ಲಿ ವೇಗವಾಗಿ ಬದಲಾಗುತ್ತಿದ್ದು, ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಮಾಹಿತಿ ಅವಶ್ಯ. ಅನುಭವದ ಜೊತೆಗೆ ತಂತ್ರಜ್ಞಾನದ ಅರಿವು ಇದ್ದಾಗ ಮಾತ್ರ ಕೌಶಲ್ಯ ದ್ವಿಗುಣಗೊಳ್ಳುವುದಲ್ಲದೆ, ಉದ್ಯೋಗವು ದೊರೆಯುತ್ತದೆ. ಹೊಸ ರೀತಿಯ ತಂತ್ರಜ್ಞಾನ ಬಳಕೆಯ ಕುರಿತು ಗ್ರಂಥಾಲಯ ಮೇಲ್ವಿಚಾರಕರಿಗೆ ಸರ್ಕಾರವು ಪ್ರತೀ ಜಿಲ್ಲೆಯಲ್ಲೂ ತರಬೇತಿ ನೀಡುವ ಕೆಲಸ ಮಾಡುತ್ತಾ ಬರುತ್ತಿದೆ ಎಂದು ಸಚಿವರು ಹೇಳಿದರು. ಜಿಲ್ಲಾ ಗ್ರಂಥಾಲಯವನ್ನು ಸುಮಾರು 5 ಕೋಟಿ.ರೂ ಅನುದಾನದಡಿ, ಸಂಪೂರ್ಣ ಡಿಜಿಟಲೈಸ್ ಮಾಡಲಾಗುತ್ತಿದ್ದು, ಆದಷ್ಟು ಶೀಘ್ರದಲ್ಲಿ ಐ.ಎ.ಎಸ್, ಕೆ.ಎ.ಎಸ್, ಐ.ಪಿ.ಎಸ್ ಮುಂತಾದ ಸಿವಿಲ್ ಸರ್ವಿಸ್ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ತರಬೇತಿ ಕೇಂದ್ರಗಳನ್ನು ತೆರೆಯುವ ಉದ್ದೇಶವನ್ನೂ ಹೊಂದಿದೆ ಎಂದು ಅವರು ಹೇಳಿದರು. ಪುಸ್ತಕ ಸಂಸ್ಕøತಿ ಬೆಳೆಸುವುದು ಗ್ರಂಥಾಲಯದ ಮೂಲ ಉದ್ದೇಶವಾಗಿದ್ದು, ಆಧುನಿಕ ಡಿಜಿಟಲ್ ಮಾದರಿಯಲ್ಲಿ ತರಬೇತಿ ನೀಡಲಾಗುತ್ತಿದ್ದು, ಓದುಗರನ್ನು ಗ್ರಂಥಾಲಯದತ್ತ ಮನಸೆಳೆಯುವ ರೀತಿಯಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ಶಿಬಿರ ನಡೆಸಲಾಗುತ್ತದೆ ಎಂದು ಬೆಂಗಳೂರು ಸಾರ್ವಜನಿಕ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಎಸ್.ಹೊಸಮನಿ ಹೇಳಿದರು. ಗ್ರಾಮ ಪಂಚಾಯತ್ 5766 ಗ್ರಂಥಾಲಯಗಳು, ಜಿಲ್ಲಾ ಕೇಂದ್ರದಲ್ಲಿ 30 , ನಗರ ಗ್ರಂಥಾಲಯ 26, 70 ಅಲೆಮಾರಿ ಜನಾಂಗದವರ ಗ್ರಂಥಾಲಯ, 31 ಸಮುದಾಯ ಕೇಂದ್ರ ಗ್ರಂಥಾಲಯಗಳು ರಾಜ್ಯದಾದ್ಯಂತ ಸೇವೆ ಸಲ್ಲಿಸುತ್ತಿವೆ. ವಿಶೇಷಚೇತನರಿಗೂ ಅನುಕೂಲವಾಗುವಂತೆ ರಾಜ್ಯದಲ್ಲಿ 30 ಬ್ರೈಲ್ ಕಾರ್ನರ್ ಗ್ರಂಥಾಲಯದ ವ್ಯವಸ್ಥೆ ಮಾಡಲಾಗುತ್ತಿದ್ದು, 4 ಸಾವಿರ ಆಡಿಯೋ ಪುಸ್ತಕಗಳನ್ನು ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಒದಗಿಸಲಾಗುತ್ತಿದೆ. ಪ್ರತ್ಯೇಕವಾದ ಅಧ್ಯಯನ ವಿಭಾಗ ತೆರೆಯವುದರ ಜೊತೆಗೆ ಹೆಚ್ಚಿನ ಗ್ರಂಥಾಲಯ ಒದಗಿಸುವ ಬಗ್ಗೆಯೂ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಉಪಸ್ಥಿತರಿದ್ದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಸ್ವಾಗತಿಸಿದರು, ಶಕುಂತಲ ಕುಂದರ್ ವಂದಿಸಿ, ಜ್ಯೋತಿ ಸಾವಂತ್ ಕಾರ್ಯಕ್ರಮ ನಿರೂಪಿಸಿದರು
(Release ID 644)