ರಾಜ್ಯ ಪ್ರಕಟಣೆ ಜಿಲ್ಲಾ ಪ್ರಕಟಣೆ ಆಮಂತ್ರಣ ನುಡಿಚಿತ್ರ home Home
State Releases District Releases Invitations Features
ಕನ್ನಡ ಬಿಡುಗಡೆಗಳು
ದಿನಾಂಕ ತಿಂಗಳು ವರ್ಷ
  • General
  • ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್  

 
General11-ಜನವರಿ, 2018 17:19 IST

ರನ್ನ, ಚಾಲುಕ್ಯ ಉತ್ಸವ ಆಚರಣೆಗೆ ನಿರ್ಧಾರ
ಬಾಗಲಕೋಟೆ: ಜನವರಿ, 11 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಸಾಂಸ್ಕøತಿ ವೈಭವವನ್ನು ಸಾರುವ ರನ್ನ ಹಾಗೂ ಚಾಲುಕ್ಯ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಈ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬರಗಾಲದ ಹಿನ್ನಲೆಯಲ್ಲಿ ಕಳೆದ ಮೂರು ವರ್ಷಗಳಿಂದ ರನ್ನ ಹಾಗೂ ಚಾಲುಕ್ಯ ಉತ್ಸವವನ್ನು ಆಚರಿಸಲು ಸಾದ್ಯವಾಗಿರಲಿಲ್ಲ. ಈಗ ಅನುಕೂಲಕರವಾದ ವಾತಾವರಣವಿದ್ದು, ಫೆಬ್ರವರಿ ಮಾಹೆಯಲ್ಲಿ ಅದ್ಬುತವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು. ಉತ್ಸವಕ್ಕೆ ಸಂಬಂಧಿಸಿದಂತೆ ಎಲ್ಲ ತರಹದ ಸಿದ್ದತೆಗಳನ್ನು ಮಾಡಿಕೊಳ್ಳಲು ತಿಳಿಸಿದರ ಸಚಿವರು ಈ ವರ್ಷ ರನ್ನ ಹಾಗೂ ಚಾಲುಕ್ಯ ಉತ್ಸವವನ್ನು ವೈಭವದಿಂದ ಆಚರಿಸುವ ಹಿನ್ನಲೆಯಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಅವಧಿ ಕಡಿಮೆ ಇರುವದರಿಂದ ಇಂದಿನಿಂದಲೇ ಉತ್ಸವದ ಸಿದ್ದತೆಗಾಗಿ ನಡೆಸುವಂತೆ ತಿಳಿಸಿದರು. ಇದೊಂದು ರಾಷ್ಟ್ರ ಮಟ್ಟದ ಕಾರ್ಯಕ್ರಮವಾಗಿರುವದರಿಂದ ಉತ್ಸವದ ಅಧಿಕೃತ ಛಾಪನ್ನು ಪಡೆಯುವ ನಿಟ್ಟಿನಲ್ಲಿ ಇದೇ ಜನವರಿ 18 ರಂದು ಸಭೆಯನ್ನು ಹಮ್ಮಿಕೊಳ್ಳುವಂತೆ ಸಚಿವರು ತಿಳಿಸಿದರು. ಅದ್ಬುತವಾಗಿ ಉತ್ಸವವನ್ನು ನಡೆಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದ್ದು, ಜನವರಿ 18 ರಂದು ನಡೆಯುವ ಸಭೆಯಲ್ಲಿ ಕಾರ್ಯಕ್ರಮದ ಸಿದ್ದತೆಗಾಗಿ ವಿವಿಧ ಸಮಿತಿಗಳ ರಚಣೆ, ಪೂರುರೇಷೆ, ಸಂಪನ್ಮೂಲ ಕೃಢೀಕರಣ, ಸಾಂಸ್ಕøತಿಕ ಕಾರ್ಯಕ್ರಮ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
(Release ID 649)